ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಯ ಹಿರ್ಗಾನದಲ್ಲಿದೆ ಮರಣ ಗುಂಡಿ

ಕಾರ್ಕಳ: ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿ 1 ರಲ್ಲಿನ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಕ್ರಾಸ್ ಬಳಿಯ ಇಳಿಜಾರಿನಲ್ಲಿ ಮೋರಿಯ ಕಾಂಕ್ರೀಟ್ ಸ್ಲ್ಯಾಬ್ ಕುಸಿದಿದ್ದು ವಾಹನ ಚಾಲಕರ ಪಾಲಿಗೆ ಮರಣ ಗುಂಡಿಯಾಗಿ ಪರಿಣಮಿಸಿದೆ.

ಎರಡು ಕಡೆಯಿಂದ ಇಳಿಜಾರು ಹಾಗೂ ತಿರುವಿನಿಂದ ಕೂಡಿದ ಪರಿಣಾಮ ವಾಹನಗಳು ಅತೀ ವೇಗವಾಗಿ ಬಂದು ಇಕ್ಕಟ್ಟಿನ ರಸ್ತೆಯಲ್ಲಿ ನಿಯಂತ್ರಣ ತಪ್ಪಿ, ಕುಸಿದಿರುವ ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿ ಬೀಳುವ ಅಪಾಯ ಎದುರಾಗಿದೆ.

ಈ ಹಿಂದೆ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಈ ಮೋರಿಯನ್ನು ಹೊಸದಾಗಿ ಮರು ನಿರ್ಮಿಸಲಾಗಿತ್ತು ಆದರೆ ಕಾಮಗಾರಿ ಸಂದರ್ಭದಲ್ಲಿ ಕಬ್ಬಿಣದ ಸರಳುಗಳ ಅಸಮರ್ಪಕ ಜೋಡಣೆಯಿಂದ ಒಂದು ಪಾರ್ಶ್ವದ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ರಸ್ತೆಯಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ.

ಈ ವಿಚಾರ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಭಾವಿಸಿದ ಅಧಿಕಾರಿಗಳು ಹಳೆಯ ಕಾಂಕ್ರೀಟ್ ಸ್ಲ್ಯಾಬ್ ನ್ನು ತೆರವುಗೊಳಿಸಿ ಎರಡು ಕಡೆ ಬ್ಯಾರಿಕೇಡ್ ಅಳವಡಿಸಿ ಎಚ್ಚರಫಲಕ ಅಳವಡಿಸಿದ್ದಾರೆ. ಆದರೆ ಮೋರಿ ಕುಸಿತವಾದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಅತಿವೇಗವಾಗಿ ಬಂದು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಮೋರಿಕುಸಿದ ಪ್ರದೇಶದಿಂದ ಅನತಿ ದೂರದಲ್ಲಿ ವಾರದ ಹಿಂದಷ್ಟೇ ತಿರುವಿನಲ್ಲಿ ಬಸ್ ಹಾಗು ಪಿಕಪ್ ವಾಹನದ ನಡುವೆ ಭೀಕರ ಅಪಘಾತದಿಂದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆದ್ದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣವೇ ಕುಸಿದ ಮೋರಿಯನ್ನು ಮರು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : Somashekar
Kshetra Samachara

Kshetra Samachara

18/09/2022 02:52 pm

Cinque Terre

6.6 K

Cinque Terre

1

ಸಂಬಂಧಿತ ಸುದ್ದಿ