ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪ್ರಧಾನಿ ಕಚೇರಿ, ಸಿಎಂ ಕಚೇರಿಗೆ ತಲುಪಿದ ಹೆದ್ದಾರಿಯ ಬ್ರಹ್ಮರಕೂಟ್ಲು ಟೋಲ್ ದುರವಸ್ಥೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಟೋಲ್ಗೇಟ್ ಹಾದುಹೋಗುವ ಬಿ.ಸಿ ರೋಡ್ ಸಮೀಪದ ಬ್ರಹ್ಮರಕೂಟ್ಲು ರಸ್ತೆಯ ದುರವಸ್ಥೆ ಫೋಟೋ ಈಗ ಪ್ರಧಾನಿ ಕಚೇರಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ತಲುಪಿದೆ.

ಪುತ್ತೂರಿನ ರಾಜೇಶ್ ಕೃಷ್ಣ ಪ್ರಸಾದ್ ಹಾಗೂ ರೋಶನ್ ಕುಮಾರ್ ಕುಂಬ್ಳೆ ಟೋಲ್ಗೇಟ್ ಹಾದುಹೋಗುವ ರಸ್ತೆಯ ಫೋಟೋ ಕ್ಲಿಕ್ಕಿಸಿ ಪಿಎಂಒ ಇಂಡಿಯಾ ಕಚೇರಿ, ಕೇಂದ್ರ ಭೂಸಾರಿಗೆ ಸಚಿವಾಲಯ ಹಾಗೂ ಕರ್ನಾಟಕ ಸಿಎಂ ಇವರಿಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಒಂದೆಡೆ ಟ್ವೀಟ್ ಮೂಲಕ ಗಮನ ಸೆಳೆದಿದ್ದರೆ, ಮತ್ತೊಂದೆಡೆ ಫೇಸ್ ಬುಕ್ ಗಳಲ್ಲಿ ಹಲವರು ಈ ಕುರಿತು ಫೊಟೋ ಹಾಕಿದ್ದು, ಟೋಲ್ ವಸೂಲಿಯಾಗುತ್ತದೆ, ನಿರ್ವಹಣೆ ಎಲ್ಲಿದೆ ಎಂದು ಕೇಳಿದ್ದಾರೆ.

ಸಮೀಪದಲ್ಲೇ ಹೆದ್ದಾರಿಯ ಟೋಲ್ ಸಂಗ್ರಹ ಕೇಂದ್ರವಿದ್ದರೆ, ಇದನ್ನು ಅಣಕಿಸುವಂತೆ ಡಾಂಬರು ಎದ್ದುಹೋದ ರಸ್ತೆ ಇದೆ. ರಸ್ತೆ ಸರಿ ಇಲ್ಲದಿದ್ದರೂ ಅದನ್ನು ದುರಸ್ತಿಪಡಿಸುವ ಗೋಜಿಗೆ ಹೋಗದೆ ಟೋಲ್ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿರುವ ಸನ್ನಿವೇಶವನ್ನು ಬಿಂಬಿಸುವ ಫೋಟೋ ಟ್ಯಾಗ್ ಮಾಡಲಾಗಿದೆ. ಇದೀಗ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಇರುವ ಹೊಂಡಗಳನ್ನು ತಾತ್ಕಾಲಿಕವಾಗಿ ಜಲ್ಲಿ ಹಾಕಿ ಮುಚ್ಚುವ ಕಾರ್ಯ ನಡೆಸಲಾಗುತ್ತಿದ್ದು, ಯಾವುದೇ ಕ್ಷಣದಲ್ಲೂ ಮೊದಲಿನ ಸ್ಥಿತಿ ನಿರ್ಮಾಣವಾಗಬಹುದು.

Edited By : Nagaraj Tulugeri
Kshetra Samachara

Kshetra Samachara

14/07/2022 09:22 am

Cinque Terre

8.22 K

Cinque Terre

2

ಸಂಬಂಧಿತ ಸುದ್ದಿ