ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಅಗತ್ಯ: ಅಂದು ಕಾಂಗ್ರೆಸ್ ಮಾಡಿತ್ತು, ಇಂದು ನೀವು ಮಾಡಿ : ಬಿಜೆಪಿಗೆ ಖಾದರ್ ಸಲಹೆ

ಮಂಗಳೂರು: ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಾಮಗಾರಿಯ ಅಗತ್ಯವಿದೆ. ಆದರೆ ಈ ಶಾಶ್ವತ ಕಾಮಗಾರಿ ವರ್ಷಂಪ್ರತಿಯೂ ಸರಿಯಾಗಿ ನಿರ್ವಹಣೆಯಾಗದಿದ್ದಲ್ಲಿ ಕಡಲ್ಕೊರೆತಕ್ಕೊಡ್ಡಿರುವ ಕಲ್ಲುಗಳು ನಿಲ್ಲವುದಿಲ್ಲ. ಅದನ್ನು ನಿರ್ವಹಣೆ ಮಾಡಲು ಸರಕಾರ ಪ್ರತೀ ಬಜೆಟ್ ನಲ್ಲೂ ಅನುದಾನ ಮೀಸಲಿರಿಸಬೇಕು. ಈ ವಿಚಾರವನ್ನು ಮೊದಲು ಸರಕಾರ ಅರ್ಥಮಾಡಿಕೊಳ್ಳಲಿ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಇಂತಹ ಯಾವುದೇ ಹಾನಿ ನಡೆಯುವುದಕ್ಕೆ ಅವಕಾಶ ಕೊಟ್ಟಿಲ್ಲ. ನಮ್ಮ ಸರಕಾರ ಎಡಿಬಿ ಯೋಜನೆಯಲ್ಲಿ ಸದಾ ಕಡಲ್ಕೊರೆತಕ್ಕೊಳಗಾಗುತ್ತಿದ್ದ ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ಣ, ಸುಭಾಷ್ ನಗರ, ಕೈಕೊ, ಹಿಲರಿ ನಗರದಲ್ಲಿ ಶಾಶ್ವತ ಪರಿಹಾರದ ಕಾಮಗಾರಿ ನಡೆಸಿತ್ತು. ಆ ಬಳಿಕ 7-8 ವರ್ಷಗಳಲ್ಲಿ ಈವರೆಗೆ ಯಾವುದೇ ಕಡಲ್ಕೊರೆತಗಳು ಈ ಪ್ರದೇಶಗಳಲ್ಲಿ ಸಂಭವಿಸಿಲ್ಲ.

ಇದೀಗ ಈ ಕಾಮಗಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಮೂರ್ನಾಲ್ಕು ವರ್ಷಗಳಲ್ಲಿ ಇಲ್ಲೂ ಕಡಲ್ಕೊರೆತವಾಗುತ್ತದೆ ಎಂದು ಹೇಳಿದರು.

60 ವರ್ಷಗಳಲ್ಲಿ ಕಾಂಗ್ರೆಸ್ ಕಡಲ್ಕೊರೆತಕ್ಕೆ ಏನು ಪರಿಹಾರ ಒದಗಿಸಿದೆ ಎಂದು ಕೇಳುವ ಬದಲು ಬಿಜೆಪಿ ಸರಕಾರ ಈಗೇನು ಮಾಡುತ್ತಿದೆ ಎಂದು ಹೇಳಲಿ. ರಾಜ್ಯದ ಬಂದರು ಸಚಿವರು, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಇಬ್ಬರೂ ಕರಾವಳಿಯವರು. ಇವರು ಮಳೆಹಾನಿಗೊಳಗಾದ ಜನರ ಸಮಸ್ಯೆಗಳನ್ನು ಆಲಿಸಲು ವಾರದ ಬಳಿಕ ಕಂದಾಯ ಸಚಿವರೊಂದಿಗೆ ಬರಬೇಕೆ. ಕಡಲ್ಕೊರೆತದ ವಿಚಾರದಲ್ಲಿ ಕಂದಾಯ ಸಚಿವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಅದು ಬಂದರು ಸಚಿವರ ವ್ಯಾಪ್ತಿಗೆ ಬರುತ್ತದೆ.

ಆದ್ದರಿಂದ ಮೀನುಗಾರರಿಗೆ ಬೇಕಾಗಿ ಈ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಯ ಬಗ್ಗೆ ಸಚಿವರು ಚಿಂತನೆ ನಡೆಸಬೇಕು. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಒದಗಿಸಬೇಕೇ ಹೊರತು ರಾಜಕೀಯ ಮಾತನಾಡಿದರೆ ಜನರಿಗೆ ಪರಿಹಾರ ಸಾಧ್ಯವಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.

Edited By : Somashekar
Kshetra Samachara

Kshetra Samachara

08/07/2022 03:54 pm

Cinque Terre

14.96 K

Cinque Terre

1

ಸಂಬಂಧಿತ ಸುದ್ದಿ