ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಅಪಾಯಕಾರಿ ರಸ್ತೆ-ಸಂಚಾರ ದುಸ್ತರ-ದುರಸ್ತಿ ಯಾವಾಗ ?

ಬಜಪೆ: ಬಜಪೆ - ಕೈಕಂಬ ರಾಜ್ಯ ಹೆದ್ದಾರಿಯ ಸುಂಕದಕಟ್ಟೆಯಿಂದ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ವರೆಗಿನ ರಸ್ತೆಯು ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದು,ವಾಹನ ಸವಾರರಿಗೆ ಬಹಳಷ್ಟು ಅಪಾಯಕಾರಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಈ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು ಉಂಟಾಗಿದ್ದು,ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಇದೀಗ ಕೆಲದಿನಗಳಿಂದ ಮಳೆಯು ಸುರಿಯುತ್ತಿದ್ದು,ರಸ್ತೆಯಲ್ಲಿನ ದೊಡ್ಡ ಗಾತ್ರದ ಹೊಂಡಗಳಲ್ಲಿ ನೀರು ನಿಂತಿದೆ.

ಹೊಂಡದಲ್ಲಿ ನೀರು ನಿಂತ ಪರಿಣಾಮವಾಗಿ ಕೆಲ ವಾಹನ ಸವಾರರು ಹೊಂಡವನ್ನು ಗಮನಿಸದೆ ರಸ್ತೆಯಲ್ಲಿಯೇ ಬಿದ್ದು ಗಾಯಗೊಂಡ ಘಟನೆಯು ನಡೆದಿತ್ತು.ಈ ರಸ್ತೆಯಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನಂಪ್ರತಿ ಸಂಚಾರಿಸುವುದೇ ಕಷ್ಟಕರವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯು ಹದಗೆಟ್ಟ ರಸ್ತೆಯ ದುರಸ್ತಿಕಾರ್ಯವನ್ನು ನಡಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Edited By :
Kshetra Samachara

Kshetra Samachara

20/05/2022 09:08 pm

Cinque Terre

15.92 K

Cinque Terre

0

ಸಂಬಂಧಿತ ಸುದ್ದಿ