ಮೂಡುಬಿದಿರೆ: ಅಳಿಯೂರು ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಮತ್ತು 80 ಲಕ್ಷ ರೂ.ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು 25 ಲಕ್ಷ ರೂ. ವೆಚ್ಚದ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕ ಉಮಾನಾಥ್ ಕೋಟ್ಯಾನ್ ನೆರವೇರಿಸಿದರು.
ಸೋಮವಾರ ಅಳಿಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ 30 ಲಕ್ಷ ಅನುದಾನದಲ್ಲಿ 3 ಕೊಠಡಿಗಳ ಉದ್ಘಾಟನೆ, 7 ಲಕ್ಷ ರೂಪಾಯಿ ಅನುದಾನದಲ್ಲಿ ಶೌಚಾಲಯ ಉದ್ಘಾಟನೆ, ಅಳಿಯೂರು ಪ್ರಾಥಮಿಕ ಶಾಲೆಯಲ್ಲಿ 21 ಲಕ್ಷ ರೂಪಾಯಿ ವೆಚ್ಚದಲ್ಲಿ 2ಕೊಠಡಿ ಉದ್ಘಾಟನೆ, ಎಂಆರ್ ಪಿಎಲ್ ಪ್ರಯೋಜಕತ್ವದಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ಉದ್ಘಾಟಿಸಿ, ಶಾಲೆಗೆ ನೀರಿನ ಸಂಪರ್ಕಕ್ಕೆ ಶಿಲಾನ್ಯಾಸಗೈದರು.
ಈ ಸಂದರ್ಭದಲ್ಲಿ ವಾಲ್ಪಾಡಿ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಸುವರ್ಣ, ಪದ್ಮನಾಭ ಕೋಟ್ಯಾನ್, ಬಿಜೆಪಿ ಮುಖಂಡ ಸುಕೇಶ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಸುಜಾತ ಕೆ.ಪಿ., ಪ್ರೌಢಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/05/2022 10:14 pm