ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋವಿಡ್ ಕಾರಣದಿಂದ ಅನಾಹುತ ನಡೆಯಬಾರದೆಂಬ ಉದ್ದೇಶದಿಂದ ಸರಕಾರಿ ಶಾಲೆಗಳು ತೆರೆದಿಲ್ಲ: ಸಚಿವ ಕೋಟ

ಉಡುಪಿ: ಎರ್ಮಾಳು ಸರಕಾರಿ ಶಾಲೆಗಳ ಅಭಿವೃದ್ಧಿಯಾಗಬೇಕಾದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಬೇಕಿದೆ. ರಾಜ್ಯದಲ್ಲಿ ಸರಕಾರಿ ಶಾಲೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಕೋವಿಡ್ 19 ಬಳಿಕ ಹೆಚ್ಚಿನ ಪೋಷಕರು ಸರಕಾರಿ ಶಾಲೆಗಳನ್ನು ಅವಲಂಬಿತರಾಗಿದ್ದಾರೆ ಎಂದು ರಾಜ್ಯ ಸರಕಾರದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಇಂದು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಎರ್ಮಾಳು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ನಲಿ-ಕಲಿಗೆ ಮೆರಿಟ್‍ನಲ್ಲಿ ಆಯ್ಕೆಯಾದ ಶಿಕ್ಷಕರು ಅದು ಸರಕಾರಿ ಶಾಲೆಯ ಶಿಕ್ಷಕರು. ಆ ನಿಟ್ಟಿನಲ್ಲಿ ಸರಕಾರೀ ಶಾಲೆಗಳು ಅಭಿವೃದ್ಧಿಯಾದರೆ ಮಾತ್ರ ನಮ್ಮ ವ್ಯವಸ್ಥೆಗಳು ಸರಿಯಾಗಿ ಉಳಿಯಲು ಸಾಧ್ಯವಾಗುತ್ತದೆ. ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮಕ್ಕಳ ಪೋಷಕರು, ದಾನಿಗಳೊಂದಿಗೆ ಸೇರಿಕೊಂಡು ಕನಿಷ್ಠ ತಿಂಗಳಿಗೊಮ್ಮೆ ಸಭೆ ನಡೆಸಿ ಶಾಲಾಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಬೇಕು. ಸರಕಾರಿ ಶಾಲೆಗೆ ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕಿದೆ. ಸರಕಾರಿ ಶಾಲಾ ಮಕ್ಕಳ ರಕ್ಷಣೆಗಾಗಿ ಕೋವಿಡ್ ಕಾರಣದಿಂದ ಅನಾಹುತ ನಡೆಯಬಾರದೆಂಬ ಉದ್ದೇಶದಿಂದ ಸರಕಾರಿ ಶಾಲೆಗಳು ಆರೋಗ್ಯ ಇಲಾಖೆಯ ಸ್ಪಷ್ಟ ಮಾಹಿತಿ ಇಲ್ಲದೆ ತೆರೆಯುವುದಿಲ್ಲ

ಎಂದು ತಿಳಿಸಿದರು.

ರಾಜ್ಯದಲ್ಲಿನ 48 ಸಾವಿರ ಸರಕಾರಿ ಶಾಲೆಗಳಲ್ಲಿ 5 ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ 10 ಕ್ಕಿಂತಲೂ ಕಡಿಮೆ ಮಕ್ಕಳಿದ್ದಾರೆ. 15 ಸಾವಿರ ಶಾಲೆಗಳು ಸುಸಜ್ಜಿತವಾಗಿಲ್ಲ. ಸುಮಾರು 6 ಸಾವಿರ ಶಾಲೆಗಳ ಶೌಚಾಲಯಗಳು ಸುಸಜ್ಜಿತಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಇದೀಗ ಸುಸಜ್ಜಿತವಾಗಿರುವ ಸರಕಾರಿ ಶಾಲೆಗಳು ಉಳಿದುಕೊಳ್ಳಬೇಕಾದರೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಳಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದರು.

Edited By : Manjunath H D
Kshetra Samachara

Kshetra Samachara

20/10/2020 07:13 pm

Cinque Terre

24.69 K

Cinque Terre

0

ಸಂಬಂಧಿತ ಸುದ್ದಿ