ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು : ಡಾ.ವೈ ಭರತ್ ಶೆಟ್ಟಿ

ಮುಲ್ಕಿ: ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು.ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಅಭಿವೃದ್ಧಿ ಯೋಜನೆಗಳಿಂದ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕರಾದ ಡಾ. ವೈ ಭರತ್ ಶೆಟ್ಟಿ ಹೇಳಿದರು. ನಾನು ಶಾಸಕನಾದ ಮೇಲೆ ಮಳೆ ಹಾನಿ ಕಾಮಗಾರಿ ಯೋಜನೆಯಲ್ಲಿ ಇಲ್ಲಿ ಅಭಿವೃದ್ಧಿಗೆ 20 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದೆ. ಆದರೆ ಅದನ್ನು ಮಾಜಿ ಶಾಸಕ ಮೊಯ್ದೀನ್ ಭಾವ ತಮ್ಮ ಅವಧಿಯಲ್ಲಿ ಇಟ್ಟ ಹಣ, ಅದನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಾ ಬಂದಿದ್ದಾರೆ. ಅದಕ್ಕೆ ಈಗ ಸೂಕ್ತ ಉತ್ತರ ಕೊಟ್ಟಿದ್ದೇನೆ. ಈ ರಸ್ತೆ ಅಭಿವೃದ್ಧಿಗೆ 20 ಲಕ್ಷ ಸಾಕಾಗುವುದಿಲ್ಲ ಎಂದು ಅರಿವಿಗೆ ಬಂದ ಬಳಿಕ ಈಗ 3 ಕೋಟಿ ಅನುದಾನ ಮೀಸಲಿಟ್ಟು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹೇಳಿದರು.

Edited By : Manjunath H D
Kshetra Samachara

Kshetra Samachara

10/10/2020 05:06 pm

Cinque Terre

17.01 K

Cinque Terre

1

ಸಂಬಂಧಿತ ಸುದ್ದಿ