ಮಂಗಳೂರು: ಕೊರೊನಾಗೆ ಬಲಿಯಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಭೆ ನಗರದ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ದಿ. ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ತನ್ನ ಜೀವನದ ಹೆಚ್ಚು ಸಮಯ ಪಾರ್ಟಿ ಸಿದ್ಧಾಂತದ ವಿಚಾರಕ್ಕೆ ಮೀಸಲಾಗಿಟ್ಟವರು ಸುರೇಶ್ ಅಂಗಡಿಯವರು. ಪರಿಶ್ರಮದಿಂದ ಮುಂಬೈ ಕರ್ನಾಟಕದಲ್ಲಿ ಬಿಜೆಪಿಯನ್ನು ಬಲಪಡಿಸಿದ್ದರು. ಸರಳತೆ, ಪ್ರೀತಿ ,ವಿಶ್ವಾಸ, ನಂಬಿಕೆ ಇದಕ್ಕೆಲ್ಲಾ ಇನ್ನೊಂದು ಹೆಸರೇ ಸುರೇಶ್ ಅಂಗಡಿಯವರು. ಸಮರ್ಥ ಸಂಸದ, ಅದರಲ್ಲೂ ಒಬ್ಬ ಮಾರ್ಗದರ್ಶಕನನ್ನು ಬಿಜೆಪಿ ಕಳೆದುಕೊಂಡಿದೆ. ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ, ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದವರು. ಕೇಂದ್ರ ಸಚಿವರಾಗಿ ರಾಜ್ಯದಲ್ಲಿ ರೈಲ್ವೆ ಇಲಾಖೆ ಅಭಿವೃದ್ಧಿ ಪಡಿಸಲು, ದೇಶದ ರೈಲ್ವೆಯಲ್ಲಿ ಹೊಸ ಚಿಂತನೆ ಮೂಡಿಸಲು ಸುರೇಶ್ ಅಂಗಡಿಯವರು ಕಾರಣರಾಗಿದ್ದರು ಎಂದರು. ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
24/09/2020 02:32 pm