ಉಡುಪಿ : ಉಡುಪಿ ತಾಲೂಕಿನ ಕೆಮ್ಮಣ್ಣು ನಿವಾಸಿ ಮೆಲ್ವಿನ್ ಫರ್ನಾಂಡಿಸ್ ರವರ ಮಗ ಗ್ಲೆನ್ವಿಲ್ ಫರ್ನಾಂಡಿಸ್ ಯುದ್ದಪೀಡಿತ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.
ಮಗನ ಸ್ಥಿತಿ ನೆನೆದು ಹೆತ್ತವರು ಆತಂಕದಲ್ಲಿರುವ ವೇಳೆ ಅವರಿಗೆ ಧೈರ್ಯ ತುಂಬಲು ಇಂದು ಶಾಸಕ ರಘುಪತಿ ಭಟ್ ಅವರ ಮನೆಗೆ ಭೇಟಿ ನೀಡಿದರು. ಕುಟುಂಬದವರ ಜೊತೆ ಮಾತನಾಡಿ ಧೈರ್ಯ ಹೇಳಿ ಶೀಘ್ರ ನಿಮ್ಮ ಮಗನನ್ನು ಕರೆತರುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
Kshetra Samachara
28/02/2022 09:18 pm