ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಜಲ ಸ್ಫೋಟಕ್ಕೆ ಮೀನುಗಾರರು ಕಂಗಾಲು; ಪ್ರತಿಭಟನೆ ಮೂಲಕ ಆಕ್ರೋಶ

ಬೈಂದೂರು: ಕಳೆದ ವಾರ ಶಿರೂರು ಭಾಗದಲ್ಲಿ ಸಂಭವಿಸಿದ ಜಲ ಸ್ಫೋಟದಂತಹ ಪ್ರಕೃತಿ ವಿಕೋಪದಿಂದಾಗಿ ಮೀನುಗಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲೂ ಮೀನುಗಾರರ ಸಮಾಜವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಕಡೆಗಣಿಸಿದ್ದು, ಸರಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಉಪ್ಪುಂದ ಭಾಗದ ಮೀನುಗಾರರು ಬೈಂದೂರು ತಾಲೂಕು ಕಚೇರಿ ಮುಂಭಾಗದಲ್ಲಿ ಸಾವಿರಕ್ಕೂ ಅಧಿಕ ಮೀನುಗಾರರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಈ ವೇಳೆ ಪ್ರತಿಭಟನೆಯನ್ನು ಉದ್ದೇಶ ಮಾತನಾಡಿದ ಮೀನುಗಾರರ ಮುಖಂಡ ಮದನ್ ಕುಮಾರ್, ಕಡಲ ಮಕ್ಕಳನ್ನು ರೋಡಿಗೆ ಬರಲು ಬಿಡಬೇಡಿ, ಹಿಂದೆ ನಾವು ರೋಡಿಗಿಳಿದಾಗ ಏನೇನು ಆಗಿದೆ ಎಂದು ಚರಿತ್ರೆಯನ್ನು ತಿರುಚಿ ನೋಡಿ ನಮ್ಮ ಹಕ್ಕು ಹಾಗೂ ಬೇಡಿಕೆಗಳಿಗೆ ರೋಡಿಗೆ ಬರುವ ಸನ್ನಿವೇಶ ಸೃಷ್ಟಿಯಾಗುವುದು ಬೇಡ, ಬೋರ್ಗರೆಯುವ ಸಮುದ್ರ ಆಳೆತ್ತರದ ಅಲೆಗಳ ನಡುವೆ ದಿನವೂ ಸೆಣಸಾಡುವ ಮೀನುಗಾರ ಕಡಲಿಗೆ ಹೆದರಿಸುವಾಗ ಬೇರೆ ಯಾರಿಗೆ ಹೆದರುತ್ತಾನೆ ಎಂದು ಸರಕಾರಕ್ಕೆ ಎಚ್ಚರಿಸಿದ್ದಾರೆ.

ಶಿರೂರಿನಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಮೀನುಗಾರರ 40ಕ್ಕೂ ಹೆಚ್ಚು ದೋಣಿ ಹಾಗೂ ಮೀನುಗಾರ ಸಲಕರಣಿಗಳು ಸಮುದ್ರ ಪಾಲಾಗಿವೆ. 3 ಕೋಟಿಗೂ ಅಧಿಕ ನಷ್ಟವಾಗಿದೆ ಇಷ್ಟು ದೊಡ್ಡ ಅವಘಡ ನಡೆದು ಹೋದರು ಅಧಿಕಾರಿಗಳು, ಶಾಸಕರು ಯಾರೂ ಭೇಟಿ ನೀಡಿಲ್ಲ. ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದರು.

ಈ ವಿಚಾರಕ್ಕೆ ಬೈಂದೂರು ತಹಶೀಲ್ದಾರ್ ಮೂಲಕ ಡಿಸಿಗೆ ಮನವಿ ಸಲ್ಲಿಸಿಲಾಗಿದೆ.

Edited By : Somashekar
Kshetra Samachara

Kshetra Samachara

06/08/2022 01:34 pm

Cinque Terre

10.89 K

Cinque Terre

2

ಸಂಬಂಧಿತ ಸುದ್ದಿ