ಉಡುಪಿ: ಹಲವು ವರ್ಷಗಳಿಂದ ಹಡಿಲು ಬಿದ್ದಿದ್ದ, ಉಡುಪಿಯ ಕೃಷಿ ಭೂಮಿ ಈಗ ಸಮೃದ್ದವಾಗಿ ನಳ ನಳಿಸುತ್ತಿದೆ. ಭತ್ತದ ಪೈರುಗಳು ಕಂಗೊಳಿಸುತ್ತಿವೆ. ಶ್ರಮಕ್ಕೆ ಪ್ರತಿಫಲ ದೊರೆತಿದೆ. ಆದರೆ ಭತ್ತದ ಪೈರುಗಳ ಮಧ್ಯೆ ಇರುವ ಕಳೆ ಗಿಡಗಳು, ಪೈರಿನ ಬೆಳವಣಿಗೆಗೆ ಅಡ್ಡಿ ಪಡಿಸುತ್ತಿದೆ. ಹೀಗಾಗಿ ಕೇಂದ್ರ ಕೃಷಿ ಸಚಿವರೇ ಬಂದು ಕಳೆ ಕೀಳುವುದಕ್ಕೆ ಚಾಲನೆ ನೀಡಿದ್ದಾರೆ..
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಡಿಲು ಬಿದ್ದಿದ್ದ 1500 ಎಕರೆ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕೇದಾರೋತ್ಥಾನ ಎನ್ನುವ ವಿಶೇಷ ಅಭಿಯಾನ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿದೆ. ಸದ್ಯ ಭತ್ತದ ನಾಟಿ ಕಾರ್ಯ ಮುಗಿದು ಭತ್ತದ ಪೈರು ಸಮೃದ್ಧವಾಗಿ ಬೆಳೆದಿದೆ. ಆದ್ರೆ ಪೈರಿನ ನಡುವೆ ಇರೋ ಕಳೆ ಗಿಡಗಳು ಪೈರಿನ ಬೆಳವಣಿಗೆ ಅಡ್ಡಿ ಪಡಿಸುತ್ತಿದೆ.ಹೀಗಾಗಿ ಕಳೆ ಕೀಳುವ ಕಾರ್ಯಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ರು. ವಿಶೇಷ ಅಂದ್ರೆ ಇದೇ ಗದ್ದೆಯಲ್ಲಿ ಹಿಂದೆ ಕೃಷಿ ಸಚಿವ ಬಿ.ಸಿ ಪಾಟೀಲ್ ನಾಟಿ ಮಾಡಿದ್ರು..
ಭತ್ತದ ಪೈರಿನ ಮಧ್ಯೆ ಇರೋ ಕಳೆ ಕೀಳುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಸಚಿವರೊಂದಿಗೆ ಸಂವಾದ ನಡೆಸಿದ್ರು, ಕೃಷಿಯಲ್ಲಿ ಖುಷಿ ಇದೆ, ಕೈ ಕೆಸರಾದ್ರೆ ಬಾಯಿ ಮೊಸರು ಅಂತ ಹೇಳಿ ರೈತನ ಕಷ್ಟವನ್ನು ಸ್ವತಃ ಗದ್ದೆಗಿಳಿದು ಅರಿತುಕೊಂಡರು..
ಹಡಿಲು ಗದ್ದೆಯ ಬೆಳೆಯಲ್ಲಿ ಊರವರು, ವಿದ್ಯಾರ್ಥಿಗಳು ಕಳೆ ತೆಗಿತೀವಿ, ಭತ್ತದ ಬೆಳೆ ಉಳಿಸ್ತೀವಿ ಎಂದು ಪಣ ತೊಟ್ಟಿದ್ದಾರೆ.ಇವರ ಶ್ರಮಕ್ಕೆ ಒಳ್ಳೆಯ ಫಲ ಸಿಗಲಿ.
Kshetra Samachara
19/08/2021 07:22 pm