ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಯೋಗದಿಂದ ಭಾರತದ ಮಹತ್ವ ಜಗತ್ತಿಗೆ ತಿಳಿದಿದೆ-ಸಚಿವ ಅಂಗಾರ

ಸುಳ್ಯ: ಯೋಗದ ಮೂಲಕ ಭಾರತವನ್ನು ಜಗತ್ತು ಗುರುತಿಸುವ ಕಾಲ ಬಂದಿದೆ. ಯೋಗವು ಜಗತ್ತಿಗೆ ಭಾರತ ನೀಡಿದ ಬಹು ದೊಡ್ಡ ಕೊಡುಗೆ. ಭಾರತೀಯರು ಎಲ್ಲರೂ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ದ.ಕ ಜಿಲ್ಲಾಡಳಿತ, ಆಯುಷ್ ಇಲಾಖೆ, ಕೆವಿಜಿ ಆಯುರ್ವೇದ ಕಾಲೇಜು ಆಶ್ರಯದಲ್ಲಿ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್‌‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಅತೀ ಅಗತ್ಯ. ಆರೋಗ್ಯವಂತ ಜೀವನವನ್ನು ಮುನ್ನಡೆಸಲು ಯೋಗ ಅತ್ಯಂತ ಮಹತ್ವ ಪಡೆದಿದೆ ಎಂದು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಆಯುಷ್ ಇಲಾಖೆಯ ಸಂಯೋಜಕ ಅಜಿತ್, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ, ಕೆವಿಜಿ ಮೆಡಿಕಲ್‌ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರಮೋದ್ ಪಿ.ಎ, ಡಾ.ಸನತ್ ಕುಮಾರ್ ಡಿ.ಜೆ, ಡಾ.ವೇಣು ಎನ್, ಡಾ.ಹರ್ಷವರ್ಧನ ಕೆ, ಡಾ.ಕವಿತಾ ಬಿ.ಎಂ ಮಾರ್ಗದರ್ಶನ ನೀಡಿದರು.. ಬಳಿಕ ಯೋಗ ಪ್ರದರ್ಶನ ನಡೆಯಿತು.‌ ಸಚಿವ ಎಸ್.ಅಂಗಾರ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದರು.

ಪೂಜಾಶ್ರೀ ಹಾಗೂ ಮಹಂತ್ ರಾಜ್ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಮಿಷಾ ರಾಜ್ ಹಾಗೂ ನೇಹಾ ಕಾರ್ಯಕ್ರಮ ವನ್ನು ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

Edited By : Nagaraj Tulugeri
Kshetra Samachara

Kshetra Samachara

21/06/2022 06:52 pm

Cinque Terre

4.08 K

Cinque Terre

0

ಸಂಬಂಧಿತ ಸುದ್ದಿ