ಉಡುಪಿ: ಉಡುಪಿಯ ಬಿ.ಆರ್ ಶೆಟ್ಟಿ ಸರಕಾರಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಇವತ್ತು ಅಕ್ಷರಶಃ ಬಂದ್ ಆಗಿದ್ದು ರೋಗಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಇಲ್ಲಿನ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ಸಹಿತ ಯಾವುದೇ ಸವಲತ್ತು ನೀಡಿಲ್ಲ.ಈ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿ ಆಸ್ಪತ್ರೆಯೊಳಗೇ ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕಿಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಇಲ್ಲದೆ ವಾಪಾಸಾಗುತ್ತಿದ್ದಾರೆ.ದೂರದೂರುಗಳಿಂದ ಬಂದ ಗರ್ಭಿಣಿ ಮಹಿಳೆಯರು ಹಿಡಿಶಾಪ ಹಾಕಿ ವಾಪಾಸಾಗುವಂತಾಗಿದೆ.
Kshetra Samachara
21/02/2022 01:17 pm