ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಾಂಗ್ರೆಸ್ ಬಿಜೆಪಿ ಜಗಳದಲ್ಲಿ ಆಸ್ಪತ್ರೆ ಬಡವಾಯ್ತು!

ವರದಿ: ರಹೀಂ ಉಜಿರೆ

ಉಡುಪಿ: ಉಡುಪಿಯಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಐಷಾರಾಮಿ ಆರೋಗ್ಯ ಸೇವೆ ನೀಡುತ್ತಿದ್ದ ತಾಯಿ, ಮಕ್ಕಳ ಆಸ್ಪತ್ರೆಯ ಭವಿಷ್ಯವೇ ಅನಿಶ್ಚಿತತೆಗೆ ಸಿಲುಕಿದೆ.ಸರಕಾರದ ಜಾಗವನ್ನು ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ನೀಡಿ ,ಅವರ ಕೈಯಲ್ಲಿ ಷರತ್ತುಗಳೊಂದಿಗೆ ಸರಕಾರ ಈ ಅಸ್ಪತ್ರೆಯನ್ನು ಕಟ್ಟಿಸಿತ್ತು.ಆದರೆ ಶೆಟ್ಟರ ಸಾಮ್ರಾಜ್ಯ ಪತನವಾಗುವುದರೊಂದಿಗೇ ಈ ಆಸ್ಪತ್ರೆಯ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ...

ಹಾಜಿ ಅಬ್ದುಲ್ಲ, ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ತಾಯಿ ಮಕ್ಕಳ ಆಸ್ಪತ್ರೆ ಬಡವರಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿತ್ತು.ಇದೊಂದು ರೀತಿ ಸರಕಾರಿ ಖಾಸಗಿ ಸಹಭಾಗಿತ್ವದ ಆಸ್ಪತ್ರೆ.ಹಳೆಯ ಸರಕಾರಿ ಆಸ್ಪತ್ರೆಯ ಜಾಗವನ್ನು ಉದ್ಯಮಿ ಬಿ.ಆರ್ ಶೆಟ್ಟಿಗೆ ನೀಡಿ, ಈ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿ ನಡೆಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.ಹನ್ನೊಂದು ಸಾವಿರದಷ್ಡು ಉಚಿತ ಹೆರಿಗೆ ಆದ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.ಆದರೆ ಬಡಜನರ ಮತ್ತು ಆಸ್ಪತ್ರೆಯ ಸಿಬ್ಬಂದಿಯ ದೌರ್ಭಾಗ್ಯ ಎನ್ನಬೇಕು,ಉದ್ಯಮಿ ಬಿ.ಆರ್ ಶೆಟ್ಟರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಪರಿಣಾಮ ಈ ಆಸ್ಪತ್ರೆಯ ನಿರ್ವಹಣೆಯೇ ಈಗ ಕಷ್ಟವಾಗಿದೆ.

ಕಳೆದ ಮೂರು ತಿಂಗಳಲ್ಲಿ ಹಲವು ಬಾರಿ ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿ ಧರಣಿಯ ಮೊರೆ ಹೋಗಿದ್ದರು.ಸದ್ಯ ಸ್ವಲ್ಪ ಮಟ್ಟಿಗೆ ವೇತನ‌ ಪಾವತಿಯಾಗಿದ್ದರೂ ಇಲ್ಲಿನ ಸಿಬ್ಬಂದಿಗಳಿಗೆ ಬಿ.ಆರ್ ಎಸ್ ಮ್ಯಾನೇಜ್ ಮೆಂಟ್ ಮೇಲೆ ನಂಬಿಕೆ ಉಳಿದಿಲ್ಲ.ಈ ಸಂಬಂಧ ಸಿಎಂ ,ಆರೋಗ್ಯ ಸಚಿವರು‌ ಮತ್ತು ಶಾಸಕ ರಘುಪತಿ ನೇತೃತ್ವದಲ್ಲಿ ಸಭೆಗಳಾಗಿವೆ.ಇಲ್ಲಿಯ ಸಿಬ್ಬಂದಿಗಳೂ ಕೂಡ ಸರಕಾರವೇ ಈ ಆಸ್ಪತ್ರೆಯನ್ನು‌ ಮುನ್ನಡೆಸಿದರೆ ಒಳ್ಳೆಯದು ಅಂತಾರೆ.

ಕಾಂಗ್ರೆಸ್ ಸರಕಾರ ಇದ್ದಾಗ ಬಿ.ಆರ್ ಶಟ್ಟರಿಗೆ ಸರಕಾರಿ ಜಾಗವನ್ನು ಪರಭಾರೆ ಮಾಡಿತ್ತು.ಆಗ ಬಿಜೆಪಿ ಕೆಲವು ಕಾರಣ ನೀಡಿ ಈ ನಿರ್ಧಾರವನ್ನು ವಿರೋಧಿಸಿತ್ತು.ಈಗ ಬಿಜೆಪಿ ಸರಕಾರ ಇದೆ.ಒಟ್ಟಾರೆ ರಾಜಕೀಯ ಪಕ್ಷಗಳ ಜಗಳದಿಂದಾಗಿ ಈ ಆಸ್ಪತ್ರೆಯನ್ನು ಮುಚ್ಚದೆ ,ಸರಕಾರವೇ ವಹಿಸಿಕೊಂಡು ಮುನ್ನಡೆಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

Edited By : Nagesh Gaonkar
Kshetra Samachara

Kshetra Samachara

24/08/2021 04:44 pm

Cinque Terre

11.1 K

Cinque Terre

0

ಸಂಬಂಧಿತ ಸುದ್ದಿ