ಮಂಗಳೂರು: ಖಾದರ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ..

ಮಂಗಳೂರು: ಮಾಜಿ ಆರೋಗ್ಯ ಸಚಿವ ಯು.ಟಿ ಖಾದರ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿತು. ಸದ್ಯದ ಸ್ಥಿತಿಗತಿಯ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಂದ ಖಾದರ್ ಮಾಹಿತಿ ಪಡೆದರು. ವೈದ್ಯಾಧಿಕಾರಿಗಳ ಜೊತೆ ಚರ್ಚೆಯ ಬಳಿಕ ಮಾತನಾಡಿದ ಯು.ಟಿ ಖಾದರ್, ಮುಂದಿನ ದಿನಗಳ ಪರಿಸ್ಥಿತಿ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಆಕ್ಸಿಜನ್ ಬಗ್ಗೆ ರಾಜ್ಯಸರ್ಕಾರವು ಪ್ರತಿ ಜಿಲ್ಲಾಡಳಿತ ವೈಟ್ ಪೇಪರ್ ಬಿಡುಗಡೆಗೊಳಿಸಬೇಕು. ರಾಜ್ಯಕ್ಕೆ ಆಕ್ಸಿಜನ್ ಬೇಡಿಕೆ ಎಷ್ಟಿದೆ .

ಪೂರೈಕೆ ಎಷ್ಟಾಗುತ್ತಿದೆ ಎಂಬ ಸ್ಪಷ್ಟವಾದ ಮಾಹಿತಿ ತಿಳಿಸಬೇಕು. ಎಲ್ಲಾ ವ್ಯವಸ್ಥೆಗಳು ಇದೆ. ಏನು ಸಮಸ್ಯೆ ಇಲ್ಲ ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಾರಗಳ ಹಿಂದೆ ಆಕ್ಸಿಜನ್ ಕೊರತೆ ಬಗ್ಗೆ ಗಮನ ಸೆಳೆದಿದ್ದರು. ಏನು ಸಮಸ್ಯೆ ಇಲ್ಲ. ಆಕ್ಸಿಜನ್ ಕೊರತೆಯಿಲ್ಲ ಎಂದು ದಿನಕ್ಕೊಂದು ಸಚಿವರು ಹೇಳಿಕೆ ನೀಡಿದ್ದರು. ಹಾಗಾದ್ರೆ ಚಾಮರಾಜನಗರದ ದುರಂತಕ್ಕೆ ಯಾರು ಹೊಣೆ..? ಎಂದು ಸರ್ಕಾರವನ್ನು ಯು.ಟಿ ಖಾದರ್ ಪ್ರಶ್ನೆ ಮಾಡಿದರು ದಕ್ಷಿಣ ಕನ್ನಡ ಜಿಲ್ಲೆಗೆ 80% ಆಕ್ಸಿಜನ್ ಜಿಂದಾಲ್ ನಿಂದ ಬರ್ತಿದೆ. 20% ಆಕ್ಸಿಜನ್ ಕೇರಳದ ಪಾಲ್ಗಾಟ್ ನಿಂದ ಬರುತ್ತಿದೆ.

ಕೇರಳದಲ್ಲಿ ಕೊರೋನಾ ಕೇಸ್ ಹೆಚ್ಚಾದ್ರೆ ಆಕ್ಸಿಜನ್ ಸಪ್ಲೈ ನಿಲ್ಲುವ ಸಾಧ್ಯತೆ ಇದೆ. ಇದಕ್ಕಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ಜಿಂದಾಲ್ ನಿಂದ ಮಹಾರಾಷ್ಟ್ರ, ಆಂದ್ರಕ್ಕೆ ಲಿಕ್ವಿಡ್ ಆಕ್ಸಿಜನ್ ಕಳುಹಿಸಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಮೊದಲ ಆದ್ಯತೆ ಕೊಡಬೇಕು. ತಮಿಳುನಾಡಿನ ಸಂಸದರು ಕೇಂದ್ರಕ್ಕೆ ಒತ್ತಡ ಹಾಕಿ ಹೆಚ್ಚುವರಿ ಆಕ್ಸಿಜನ್ ಪಡಿತಿದ್ದಾರೆ.

ನಮ್ಮ ಸಂಸದರು, ಸರ್ಕಾರಕ್ಕೆ ಯಾಕೆ ಇದು ಸಾಧ್ಯ ಆಗುತ್ತಿಲ್ಲ ಎಂದ ಅವರು ಮೆಡಿಕಲ್ ಎಮರ್ಜೆನ್ಸಿ ಸ್ಟೇಟ್ ಎಂದು ಡಿಕ್ಲೇರ್ ಮಾಡಬೇಕು. ರಾಜ್ಯಕ್ಕೆ ಬೇಕಾದ ಎಲ್ಲ ಮೆಡಿಕಲ್ ಸೌಲಭ್ಯ ಪಡೆದುಕೊಳ್ಳಬೇಕು. ಮಂತ್ರಿಗಳು, ಮುಖ್ಯಮಂತ್ರಿಗಳ ನಡುವೆ ಸಮನ್ವಯತೆ ಇರಬೇಕು. ದಿನಕ್ಕೊಂದು ಹೇಳಿಕೆ ಕೊಟ್ರೆ ಜನ ಸಾಮಾನ್ಯರು ಗೊಂದಲಕ್ಕೆ ಒಳಗಾಗುತ್ತಾರೆ ಎಂದರು.

Kshetra Samachara

Kshetra Samachara

6 days ago

Cinque Terre

24.14 K

Cinque Terre

1

  • ಹನುಮಂತ ಅಜ್ಜಪ್ಪ ಗಾಜಿ
    ಹನುಮಂತ ಅಜ್ಜಪ್ಪ ಗಾಜಿ

    ಯು ಟಿ ಖಾದರವರು ಒಬ್ಬ ಒಳ್ಳೆ ರಾಜಕಾರಣಿ ಆದ್ರೆ ಇವತ್ತು ಅಷ್ಟೇ ಬಂದು ಹೋಗಬೇಡಿ ವಾರದಲ್ಲಿ ಎರಡು ಸಲ ದವಾಖಾನೆಗೆ ಬಂದು ಹೋಗಿ plz plz ಸರ್ 🙏🙏🙏🙏🙏🙏🙏