ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಮ್ಮ‌ ಸೇವೆ ಖಾಯಂಗೊಳಿಸಿ: ಆಸ್ಪತ್ರೆ ಸಿಬ್ಬಂದಿಯಿಂದ ಶಾಸಕರಿಗೆ ಮನವಿ

ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ಆಸ್ಪತ್ರೆಯನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಹಿಂದೆ ಬಿಆರ್ಎಸ್ ಸಂಸ್ಥೆ ಈ ಆಸ್ಪತ್ರೆಯನ್ನು ನಡೆಸುತ್ತಿತ್ತು. ಇದೀಗ ಬಿಆರ್ಎಸ್ ದಿವಾಳಿ ಎದ್ದಿರುವುದರಿಂದ ಅವರಿಗೆ ವೇತನ ಬಾಕಿ ಇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅತಂತ್ರರಾಗಿರುವ ವೈದ್ಯಕೀಯ ಸಿಬಂದಿ ವರ್ಗ ಜಿಲ್ಲಾ ಪತ್ರಿಕಾ ಭವನದಲ್ಲಿ ಶಾಸಕ ಕೆ. ರಘುಪತಿ ಭಟ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಸರಿಯಾಗಿ ವೇತನ ಆಗುತ್ತಿಲ್ಲ. ಸರಕಾರ ಈಗ ಆಸ್ಪತ್ರೆಯನ್ನು ತನ್ನ ತೆಕ್ಕೆಗೆ ಪಡೆದಿರುವುದರಿಂದ ಉದ್ಯೋಗ ಅಭದ್ರತೆಯೂ ಹೆಚ್ಚಾಗುತ್ತಿದೆ. ಸಮಸ್ಯೆ ಪರಿಹಾರ ನೀಡುವಂತೆ ಕೋರಿಕೊಂಡರು. ಶಾಸಕ ಭಟ್ ಪ್ರತಿಕ್ರಿಯಿಸಿ, ಸದ್ಯಕ್ಕೆ ನಿಮ್ಮ ಉದ್ಯೋಗಕ್ಕೆ ಸಮಸ್ಯೆಯಾಗುವುದಿಲ್ಲ. ಸಂಪೂರ್ಣವಾಗಿ ಸರಕಾರದ ವಶಕ್ಕೆ ಬಂದ ಅನಂತರ ನಿಮ್ಮನ್ನು ಯಾವ ರೀತಿಯಲ್ಲಿ ಉಳಿಸಿಕೊಳ್ಳಬೇಕು ಎಂಬುದನ್ನು ಯೋಚಿಸಲಿದ್ದೇವೆ. ಖಾಯಂ ಮಾಡಲು ಸಾಧ್ಯವಿಲ್ಲ, ಹಸ್ತಾಂತರ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕು ಎಂದರು.

Edited By :
Kshetra Samachara

Kshetra Samachara

01/04/2022 06:01 pm

Cinque Terre

19.86 K

Cinque Terre

2

ಸಂಬಂಧಿತ ಸುದ್ದಿ