ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೊರೋನಾದಿಂದ ಮೃತಪಟ್ಟ 26 ಕುಟುಂಬಕ್ಕೆ 26 ಲಕ್ಷ ರೂ. ಪರಿಹಾರ ವಿತರಣೆ

ಉಡುಪಿ: ಕೋವಿಡ್ - 19 ಸೋಂಕಿನಿಂದ ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ ಎಸ್.ಡಿ.ಆರ್.ಎಫ್ ನಿಧಿಯಿಂದ ತಲಾ ರೂ. 50,000/ ಪರಿಹಾರ ಧನ ನೀಡಲಾಗುತ್ತಿದೆ. ಮೃತಪಟ್ಟ ವ್ಯಕ್ತಿಯ ವಾರಿಸುದಾರರ ಖಾತೆಗೆ ನೇರವಾಗಿ ಈ ಜಮಾ ಮಾಡಲಾಗುತ್ತಿದೆ.ಇನ್ನು ರಾಜ್ಯ ಸರ್ಕಾರದಿಂದ ಬಿ.ಪಿ.ಎಲ್ ಕುಟುಂಬಕ್ಕೆ ನೀಡಲಾಗುವ 1 ಲಕ್ಷ ಹೆಚ್ಚುವರಿ ಪರಿಹಾರ ಧನದ ಚೆಕ್ ನ್ನು ಶಾಸಕ ರಘುಪತಿ ಭಟ್ ಇಂದು ಮೃತರ ಕುಟುಂಬಕ್ಕೆ ವಿತರಿಸಿದರು.

ಉಡುಪಿ ವಿಧಾನಸಭೆ ಕ್ಷೇತ್ರದ 26 ಕುಟುಂಬಗಳಿಗೆ ಒಟ್ಟು 26 ಲಕ್ಷ ಮೊತ್ತದ ಚೆಕ್ಕನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ನಗರ ಸಭೆಯ ಪೌರಾಯುಕ್ತರಾದ ಉದಯ್ ಶೆಟ್ಟಿ, ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್ ಹಾಗೂ ನಗರಸಭಾ ಸದಸ್ಯರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

18/12/2021 12:43 pm

Cinque Terre

17.99 K

Cinque Terre

1

ಸಂಬಂಧಿತ ಸುದ್ದಿ