ಉಡುಪಿ: ಉಡುಪಿಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇರುವುದರಿಂದ ಇಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ. ಆದ್ದರಿಂದ ಜನರ ಭಾವನೆಗಳಿಗೆ ಸ್ಪಂದಿಸಿ ವೀಕೆಂಡ್ ಕರ್ಫ್ಯೂ ಹೇರಬಾರದಾಗಿ ಶಾಸಕ ರಘುಪತಿ ಭಟ್ ಮತ್ತೊಮ್ಮೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಇದೇವೇಳೆ ಗಣೇಶ ಹಬ್ಬ ಸೇರಿದಂತೆ ಅಗತ್ಯ ಕೆಲಸ ಕಾರ್ಯಗಳಿಗೆ ಹೊರಗಡೆ ಓಡಾಡುವಾಗ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸಿ ಮುಂಜಾಗ್ರತೆ ವಹಿಸುವಂತೆ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.
ವೀಕೆಂಡ್ ಕರ್ಪ್ಯೂ ಜಾರಿ ಆದಾಗಿನಿಂದಲೂ ಶಾಸಕ ರಘುಪತಿ ಭಟ್ ಕರ್ಪ್ಯೂ ತೆರವುಗೊಳಿಸುವಂತೆ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ.ಸರಕಾರ ಈ ಬಾರಿಯಾದರೂ ಶಾಸಕರ ಮನವಿಯನ್ನು ಪುರಸ್ಕರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.
Kshetra Samachara
09/09/2021 08:41 pm