ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ತೆರವುಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಹಕ್ಕೊತ್ತಾಯ ಸಭೆ ನಡೆಯಿತು. ಕುಂದಾಪುರದ ಹೋಟೆಲ್ ಶರೋನ್‍ನಲ್ಲಿ ನಡೆದ ವರ್ತಕರು, ನಾಗರಿಕರ ಹಕ್ಕೊತ್ತಾಯ ಸಭೆಯಲ್ಲಿ ಮುಖಂಡ ಬಿ.ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸದ್ಯ 1.4% ಪಾಸಿಟಿವಿಟಿ ಪ್ರಮಾಣ ಇರುವಾಗ ವೀಕೆಂಡ್ ಕರ್ಪ್ಯೂ ಹೇರಿರುವುದು ಅವೈಜ್ಞಾನಿಕ ಕ್ರಮವಾಗಿದೆ.ಉಡುಪಿ ಜಿಲ್ಲೆಯ ದೊಡ್ಡ ಸಂತೆಯಾಗಿರುವ ಕುಂದಾಪುರ ಸಂತೆ ಶನಿವಾರ ನಡೆಯುವುದರಿಂದ ವೀಕೆಂಡ್ ಕರ್ಪ್ಯೂವಿನಿಂದ ರೈತರು, ವ್ಯಾಪಾರಸ್ಥರು, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ.
ಈ ಸಂದರ್ಭದಲ್ಲಿ ವೀಕೆಂಡ್ ಕರ್ಪ್ಯೂ ಅಪ್ರಸ್ತುತ. ಅದೂ ಅಲ್ಲದೇ ಕುಂದಾಪುರದ ಮಟ್ಟಿಗೆ ಶನಿವಾರ ವಾರದಲ್ಲಿ ಅತ್ಯಂತ ಪ್ರಮುಖವಾದ ದಿನವಾಗಿದೆ. ಕುಂದಾಪುರ ಸಂತೆಗೆ ಬೈಂದೂರು, ಹೆಬ್ರಿ, ಬ್ರಹ್ಮಾವರ ತಾಲೂಕುಗಳಿಂದ ರೈತರು, ಸಾರ್ವಜನಿಕರು ಬರುತ್ತಾರೆ. ನಗರದಲ್ಲಿ ವಾರವಿಡೀ ನಡೆಯುವ ವಹಿವಾಟು ಶನಿವಾರ ಒಂದೇ ದಿನ ನಡೆಯುತ್ತದೆ. ವೀಕೆಂಡ್ ಕರ್ಪ್ಯೂ ನಿಂದ ರೈತರು, ವ್ಯಾಪಾರಸ್ಥರು, ವರ್ತಕರು ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಇದನ್ನು ಕೈಬಿಟ್ಟು, ಕೋವಿಡ್ ನಿಯಂತ್ರಣಕ್ಕೆ ಪರ್ಯಾಯ ಕ್ರಮವನ್ನು ಕೈಗೊಳ್ಳುವುದು ಸೂಕ್ತ ಎಂದರು
Kshetra Samachara
07/09/2021 11:39 am