ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸರಕಾರದ ಕೋವಿಡ್ ರೂಲ್ಸ್ ಗೆ ಸಚಿವ ಸುನಿಲ್ ಕುಮಾರ್ ಡೋಂಟ್ ಕೇರ್ !

ಕಾರ್ಕಳ: ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಇದ್ರೂ, ಸಚಿವರಿಗೆ ಮಾತ್ರ ನಿಯಮ ಅನ್ವಯ ಇಲ್ಲ.ಹೌದು..ಪ್ರಮಾಣ ವಚನ ಸ್ವೀಕರಿಸಿ ಉಡುಪಿಗೆ ಆಗಮಿಸುತ್ತಲೇ ಸಚಿವ ಸುನಿಲ್ ಕುಮಾರ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಜಿಲ್ಲೆಯಲ್ಲಿ ಯಾವುದೇ ರಾಜಕೀಯ, ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಅವಕಾಶ ಇಲ್ಲದೇ ಇದ್ದರೂಸಚಿವ ಸುನಿಲ್ ಕುಮಾರ್‌ಗೆ ಇವತ್ತು ಭರ್ಜರಿ ಸ್ವಾಗತ ಸಿಕ್ಕಿದೆ.

ಬಿಜೆಪಿ ಪಕ್ಷ ಸಚಿವರ ಸ್ವಾಗತಕ್ಕೆ, ಜನ ಜಾತ್ರೆಯನ್ನೇ ಮಾಡಿದೆ.ಈ ಪೈಕಿ ಬೆರಳೆಣಿಕೆಯ ಜನರಲ್ಲಿ ಮಾತ್ರ ಮಾಸ್ಕ್ ಇತ್ತು.ಜನರ ಮಧ್ಯೆ ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ.ಸಚಿವರ ನಿಯಮ ಉಲ್ಲಂಘನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ.

ಮಧ್ಯಾಹ್ನ ನಂತರವೂ ಬಿಜೆಪಿ ಪಕ್ಷದ ಸನ್ಮಾನ ಕಾರ್ಯಕ್ರಮ ದಿವರೆಯಲಿದೆ.ಜಿಲ್ಲಾಧಿಕಾರಿಗಳೇ ನಿಮ್ಮ ನಿಯಮ ಜನ ಸಾಮಾನ್ಯರಿಗೆ ಮಾತ್ರವೇ ? ಎಂದು ಉಡುಪಿ ಜಿಲ್ಲೆಯ ಜನ ಪ್ರಶ್ನಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

06/08/2021 01:40 pm

Cinque Terre

18.27 K

Cinque Terre

12

ಸಂಬಂಧಿತ ಸುದ್ದಿ