ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ :ಬಾರಕೂರಿನಲ್ಲಿ ಸಿದ್ಧಗೊಳ್ಳುತ್ತಿದೆ ಕೋಟಿ ಚೆನ್ನಯ್ಯ ಅಗ್ನಿಪಥ್ ತರಬೇತಿ ಕೇಂದ್ರ

ಬ್ರಹ್ಮಾವರ: ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷೆಯ ಅಗ್ನಿಪಥ್ ವೀರರ ದೈಹಿಕ ತರಬೇತಿ ಕೇಂದ್ರವು ಉಡುಪಿ ಜಿಲ್ಲೆಯ ಬಾರಕೂರು ಬಳಿಯ ಹನೆಹಳ್ಳಿ ಗ್ರಾಮದ ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಜ್ಜುಗೊಳ್ಳುತ್ತಿದೆ .

97 ವರ್ಷ ಹಳೆಯ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಇಲ್ಲಿನ ಆಡಳಿತ ಮಂಡಳಿ ಸರಕಾರದ ಈ ಯೋಜನೆಗೆ ನೀಡಿದೆ. ಜೊತೆಗೆ ತರಗತಿಯನ್ನು ಅದೇ ಆಡಳಿತದ ಶಾಲೆಯ ಮತ್ತೊಂದು ಕಡೆ ವರ್ಗಾಯಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಗ್ನಿಪಥ್ ವೀರರಿಗೆ ಉಚಿತವಾಗಿ 4 ತಿಂಗಳ ತರಬೇತಿ ನೀಡಲಾಗುತ್ತದೆ. ಒಂದು ಹಂತದಲ್ಲಿ 100 ಮಂದಿಯಂತೆ ವರ್ಷದಲ್ಲಿ 3 ತಂಡ ತರಬೇತಿ ಪಡೆಯಲಿದ್ದಾರೆ.

ಸ್ಥಳೀಯ ಹಾಗೂ ನಿವೃತ್ತ ಇಬ್ಬರು ಯೋಧರಾದ ರವಿ ಶೆಟ್ಟಿ ತೆಕ್ಕಟ್ಟೆ ಮತ್ತು ಕೃಷ್ಣಪ್ಪ ಪರ್ಕಳ ತರಬೇತುದಾರರಾಗಿ ಕಾರ್ಯ ನಿರ್ವಯಿಸಲಿದ್ದಾರೆ. ಶುಕ್ರವಾರ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಕ್ಟೋಬರ್ ಪ್ರಥಮ ವಾರ ತರಬೇತಿಗೆ ಅನುವು ಆಗಲಿದೆ ಎಂದು ತಿಳಿಸಿದರು.

Edited By :
PublicNext

PublicNext

24/09/2022 09:00 am

Cinque Terre

29.65 K

Cinque Terre

1

ಸಂಬಂಧಿತ ಸುದ್ದಿ