ಮಂಗಳೂರು: ನಗರದ ಕುದ್ರೋಳಿ ದೇವಸ್ಥಾನದಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿ ನಡೆಸಿದ್ರೆ ನೂರು ಜನರೂ ಸೇರುವುದಿಲ್ಲ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಹೇಳಿಕೆ ನೀಡಿದ್ದು, ಇದರಿಂದ ಭಕ್ತರ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಹರಿಕೃಷ್ಣ ಬಂಟ್ವಾಳ್ ಕ್ಷಮೆ ಕೇಳಬೇಕು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಬಿ ಕುಂದರ್ , ರಮಾನಾಥ ರೈ ಅವರು ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಟ್ವಾಳ ಕ್ಷೇತ್ರವನ್ನು ನಂ. ವನ್ ಮಾಡಿದ್ದಾರೆ. ಬಿಜೆಪಿಯವರು ಜಗದ್ಗುರು ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಖಾಸಗಿ ಹಾಲ್ ನಲ್ಲಿ ನಡೆಸಿದ್ದು ಗುರುಗಳಿಗೆ ಮಾಡಿದ ಅವಮಾನ ಎಂದರು.
ಹರಿಕೃಷ್ಣ ಬಂಟ್ವಾಳ್ ಪತ್ರಿಕಾಗೋಷ್ಠಿಯೊಂದರಲ್ಲಿ "ರಮಾನಾಥ ರೈ ಅವರಿಗೆ ಒಂದು ಮೆಟ್ಟಿಲೂ ಹತ್ತಲು ಆಗದ ಅನಾರೋಗ್ಯ ಇದೆ" ಎಂದು ಹೇಳಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಪಕ್ಷಾಂತರಿ ಹರಿಕೃಷ್ಣ ಬಂಟ್ವಾಳ್, ಮಾಜಿ ಸಚಿವ ರಮಾನಾಥ ರೈ ಅವರಿಗೆ ಸವಾಲು ಹಾಕುವ ಮಟ್ಟದ ರಾಜಕಾರಣಿ ಅಲ್ಲವೇ ಅಲ್ಲ.
ಈ ಹರಿಕೃಷ್ಣ ಬಂಟ್ವಾಳ್ ವಿಧಾನ ಪರಿಷತ್ ಗೆ ಟಿಕೆಟ್ ಸಿಗದಿದ್ದಾಗ ಆಸ್ಕರ್ ಮತ್ತು ರೈಗಳನ್ನು ಬಯ್ದವರು. ಕೆಲವು ಚುನಾವಣೆಗೆ ನಿಂತು ಗೆಲ್ಲಲಾಗಿಲ್ಲ. ಬರೀ 120 ಮತಗಳಷ್ಟೇ ಪಡೆದಿದ್ದರು. ಅವರು ರಮಾನಾಥ ರೈ ಬಗ್ಗೆ ಮಾತನಾಡುವುದು ಮೂರ್ಖತನ ಎಂದು ಬೇಬಿ ಕುಂದರ್ ಕಿಡಿಕಾರಿದರು.
Kshetra Samachara
16/09/2022 05:57 pm