ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತಹಶೀಲ್ದಾರ್ ಕಚೇರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ದಿಢೀರ್ ಭೇಟಿ

ಮುಲ್ಕಿ: ಮುಲ್ಕಿ ಕಾರ್ನಾಡ್ ನಲ್ಲಿರುವ ತಹಶೀಲ್ದಾರ್ ಕಚೇರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಅವರು, ಕಚೇರಿ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಅನೇಕ ದೂರುಗಳು ಬಂದಿದ್ದು ಸರಿಪಡಿಸಿಕೊಳ್ಳಿ ಎಂದು ಸೂಚನೆ ನೀಡಿದರು. ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಹೇಳಿದ ಅವರು ಕಡತ ವಿಲೇವಾರಿ ಶೀಘ್ರದಲ್ಲಿ ನಡೆಯಬೇಕು ಎಂದರು.

ಮುಂದಿನ ಬಾರಿ ಯಾವುದೇ ತಹಶೀಲ್ದಾರ್ ಕಚೇರಿಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ದೂರುಗಳು ಬಾರದ ಹಾಗೆ ಪ್ರಯತ್ನಿಸಬೇಕು ಎಂದರು.

ತಹಶೀಲ್ದಾರ್ ಕಚೇರಿ ಹಿಂಬದಿ ರೆಕಾರ್ಡ್ ರೂಮ್ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದನ್ನು ಗಮನಿಸಿದ ಶಾಸಕರು ಶೀಘ್ರದಲ್ಲಿ ಕಟ್ಟಡ ಕಾಮಗಾರಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಶ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಶೈಲೇಶ್, ರಂಗನಾಥ ಶೆಟ್ಟಿ,ವಿಠ್ಠಲ್ ಎನ್. ಎಮ್ ಮತ್ತಿತರರು ಇದ್ದರು.

Edited By : Somashekar
Kshetra Samachara

Kshetra Samachara

12/08/2022 08:14 pm

Cinque Terre

5.08 K

Cinque Terre

0

ಸಂಬಂಧಿತ ಸುದ್ದಿ