ಮಂಗಳೂರು: ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ನಿಂದ ಉಚ್ಛಾಟನೆ ಕುರಿತು ಮಂಗಳೂರಲ್ಲಿ ವಿಧಾನಪರಿಷತ್ ಸದಸ್ಯ ಬೋಜೆಗೌಡ ಸ್ಪಷ್ಪನೆ ನೀಡಿದ್ದಾರೆ. ಅವರು ಉಚ್ಚಾಟನೆಗೆ ಅರ್ಹರಿದ್ದರು. ಹೀಗಾಗಿ ಉಚ್ಚಾಟನೆ ಮಾಡಲಾಗಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಬಿ ಫಾರಂ ಕೊಡುವ ಉದ್ದೇಶವೇನು..? ಚುನಾವಣೆಯಲ್ಲಿ ಒಂದು ಪಕ್ಷದ ಅಡಿಯಲ್ಲಿ ಗೆದ್ದು ಬಂದ ನಂತರ ಅವರು ಅವಧಿ ಮುಗಿಯುವವರೆಗೂ ಪಕ್ಷಕ್ಕೆ ನಿಷ್ಠರಾಗಿರಬೇಕು.
ಒಂದು ವೇಳೆ ನಿಷ್ಠೆಯಿಂದ ಇರೋಕ್ಕೆ ಆಗದಿದ್ದರೆ ಕೂಡಲೇ ರಾಜೀನಾಮೆ ಕೊಟ್ಟು ಹೋಗಬೇಕು. ಅತ್ತ ಅವ್ರು ರಾಜೀನಾಮೆ ಕೊಡಲಿಲ್ಲ. ಇತ್ತ ಪಕ್ಷ ವಿರೋಧಿ ಚಟುವಟಿಕೆ ಮಾಡಿ ಕೂತವರನ್ನು ನಾವು ಉಚ್ಛಾಟನೆ ಮಾಡದೇ ಏನು ಮಾಡಬೇಕಿತ್ತು ಎಂದು ಪ್ರಶ್ನೆ ಮಾಡಿದರು.
ಇಂತಹ ಸಂದರ್ಭದಲ್ಲಿ ಉಚ್ಛಾಟನೆಯೇ ಮೂಲ ಆಗಿರುತ್ತದೆ. ಉಚ್ಚಾಟನೆ ಆದವರು ಸಾರ್ವಜನಿಕವಾಗಿ ನಾವು ಕಾಂಗ್ರೆಸ್ಸಿಗೆ ಮತ ಹಾಕಿದ್ದೀವಿ ಅಂತ ಹೇಳ್ತಿದ್ದಾರೆ. ಹಾಗಾದ್ರೆ ಅವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಜಾತ್ಯಾತೀತ ಜನತಾದಳ ಪಕ್ಷದ ಅಡಿಯಲ್ಲಿ ಗೆದ್ದು ಪಕ್ಷವಿರೋಧಿ ಚಟುವಟಿಕೆ ಮಾಡುವುದಕ್ಕಿಂತ ಮೊದಲು ಅವರು ಮೂಲ ಸ್ಥಾನದಲ್ಲೇ ಇರಬಹುದಿತ್ತಲ್ವೇ ಎಂದು ಪ್ರಶ್ನೆ ಮಾಡಿದರು. ತಾಕತ್ತಿದ್ದರೆ ನೀವು ಮತ್ತೆ ಚುನಾವಣೆಯಲ್ಲಿ ನಿಂತು ಗೆದ್ದು ಬನ್ನಿ ಅಂತ ಸವಾಲು ಹಾಕಿದರು.
Kshetra Samachara
23/06/2022 03:54 pm