ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಚುನಾವಣಾ ಪೂರ್ವ ತಯಾರಿ ಕುರಿತು ತರಬೇತಿ ಶಿಬಿರ ನಡೆಯಿತು.
ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಲಕ್ಷ್ಮೀನಾರಾಯಣ ಜೆ.ಎನ್ ಚುನಾವಣಾ ಪೂರ್ವ ತಯಾರಿಯ ಕುರಿತು ಮಾಹಿತಿ ನೀಡಿದರು. ಭಾಗವಹಿಸಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಚುನಾವಣೆ ನಡೆಸುವ ಕುರಿತು ಇದ್ದ ಗೊಂದಲವನ್ನು ಪರಿಹರಿಸಿಕೊಂಡರು.
ಕರಾವಳಿ ಭಾಗದಲ್ಲಿ ಸಹಕಾರಿ ಸಂಘಗಳು ಇಷ್ಟು ಎತ್ತರಕ್ಕೆ ಬೆಳೆಯಲು ಶಿಸ್ತು ಮತ್ತು ಪಾರದರ್ಶಕತೆಯಿಂದ ಸಾದ್ಯವಾಗಿದೆ ಎಂದು ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ ನಾಯಕ್ ಹೇಳಿದರು. ಕರಾವಳಿ ಜನರ ಆರ್ಥಿಕ ಶಕ್ತಿಯೇ ಸಹಕಾರಿ ಸಂಘಗಳು. ಇಲ್ಲಿನ ಸಹಕಾರಿ ಸಂಘಗಳು ರಾಜ್ಯಕ್ಕೇ ಮಾದರಿಯಾಗಿದ್ದು ಇಲ್ಲಿನ ಶಿಸ್ತು, ಪಾರದರ್ಶಕತೆ ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
Kshetra Samachara
26/05/2022 07:28 am