ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭರದಿಂದ ಸಾಗುತ್ತಿದೆ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ

ಉಡುಪಿ: ಉಡುಪಿ ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ.

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ಯೋಜನೆಯನ್ನು ನಿರ್ವಹಿಸುತ್ತಿದೆ.

ನಗರದ ಹೃದಯ ಭಾಗದಲ್ಲಿ ಪೈಪ್ಲೈನ್ ಕಾಮಗಾರಿಗಳು ಚುರುಕುಗೊಂಡಿದ್ದು, ಈಗಾಗಲೇ ಶೇ.67 ಕಾಮಗಾರಿ ಮುಗಿಸಲಾಗಿದೆ. ನಗರ ಸುತ್ತಮುತ್ತ ಸಹಿತ ಒಟ್ಟು 271 ಕಿ.ಮೀ. ಪೈಪ್ ಲೈನ್ ನಿರ್ಮಿಸಬೇಕಿದ್ದು, 170 ಕಿ.ಮೀ. ಮುಗಿಸಲಾಗಿದೆ.

ಇದರಲ್ಲಿ ಈಗಾಗಲೆ ಸುಸ್ಥಿತಿಯಲ್ಲಿರುವ ಪೈಪ್ ಲೈನ್ ಗಳನ್ನು ಉಳಿಸಿಕೊಳ್ಳಲಾಗುತ್ತಿದೆ. ಮಣಿಪಾಲ, ಚಿಟ್ಪಾಡಿ, ಮಲ್ಪೆ, ಪರ್ಕಳ, ಗುಂಡಿಬೈಲು, ಸರಳೇಬೆಟ್ಟು, ಸಗ್ರಿ, ಕಲ್ಮಾಡಿ ಸಹಿತ ಕೆಲವು ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಕೆಲವು ಕಡೆಗಳಲ್ಲಿ ಬಾಕಿ ಇದ್ದು, ಅಲ್ಲಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

10/03/2022 07:47 pm

Cinque Terre

6.26 K

Cinque Terre

0

ಸಂಬಂಧಿತ ಸುದ್ದಿ