ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಬಜೆಟ್ ಮಂಡನೆ ವೇಳೆ ಗೈರು; ಡಿಸಿ ಡೆವಲಪ್ ಮೆಂಟ್ ಅಧಿಕಾರಿ ಮೇಲೆ ಕಾನೂನು ಕ್ರಮ"

ಮಂಗಳೂರು: ಮಹಾನಗರ ಪಾಲಿಕೆಯ ಬಜೆಟ್ ಮಂಡನೆ ವೇಳೆ ಗೈರಾಗಿದ್ದ ಡಿಸಿ ಡೆವಲಪ್‌ ಮೆಂಟ್ ಅಧಿಕಾರಿಯ ನಡೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಸರಕಾರಕ್ಕೆ ಪತ್ರ ಬರೆದು ಕ್ರಮಕೈಗೊಳ್ಳಲು ಒತ್ತಾಯಿಸಲಾಗುತ್ತದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಮನಪಾ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗೆ ಈ ಬಗ್ಗೆ ಕಾರಣ ಕೇಳಿ ಲಿಖಿತವಾಗಿ ನೋಟಿಸ್ ಜಾರಿ ಮಾಡಬೇಕೆಂದು ಸೂಚನೆ ನೀಡಿದರು.

ನಗರದಲ್ಲಿ ಉದ್ದಿಮೆ ಪರವಾನಿಗೆಯಿಂದ ಹೊರಗುಳಿದ ಉದ್ದಿಮೆದಾರರನ್ನು ಹೊಸ ತಂತ್ರಾಂಶ ಮೂಲಕ ಉದ್ದಿಮೆ ಪರವಾನಿಗೆಯಡಿ ತರುವ ಕಾರ್ಯವನ್ನು ಮನಪಾ ಮಾಡುತ್ತದೆ. ಪರವಾನಿಗೆ ಪಾರದರ್ಶಕವಾಗಿರಿಸಲು, ಆದಾಯ ಮನಪಾಕ್ಕೆ ದೊರೆಯಲು ಈ ನೂತನ ತಂತ್ರಾಂಶ ಜಾರಿಗೊಳಿಸಲಾಗಿದೆ ಎಂದರು.

ಈಗಾಗಲೇ 16 ಸಾವಿರದಷ್ಟು ಉದ್ದಿಮೆ ಪರವಾನಿಗೆ ಈ ನೂತನ ತಂತ್ರಾಂಶದಲ್ಲಿ ಅಳವಡಿಕೆಯಾಗಿದೆ. ಇನ್ನೂ 6-7 ಸಾವಿರ ಉದ್ದಿಮೆದಾರರು ಪರವಾನಿಗೆ ಪಡೆಯದೆ, ನವೀಕರಣ ಮಾಡದೆ ವ್ಯವಹಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ‌. ಇವೆಲ್ಲವನ್ನೂ ಈ ನೂತನ ತಂತ್ರಾಂಶದಲ್ಲಿ ಅಳವಡಿಸಲು ಸರ್ವೇ ಅಗತ್ಯ. ಈ ಬಗ್ಗೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಕಾಲಮಿತಿಯಲ್ಲಿ ಉದ್ದಿಮೆ ಪರವಾನಿಗೆಯಡಿ ಎಲ್ಲ ಉದ್ದಿಮೆದಾರರನ್ನು ತರಲಾಗುತ್ತದೆ ಎಂದು ಹೇಳಿದರು

Edited By : Manjunath H D
Kshetra Samachara

Kshetra Samachara

31/01/2022 06:10 pm

Cinque Terre

4.9 K

Cinque Terre

0

ಸಂಬಂಧಿತ ಸುದ್ದಿ