ಉಡುಪಿ: ರಾಜ್ಯ ವಿಧಾನ ಪರಿಷತ್ ಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ನಾಳೆ ನಡೆಯಲಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 389 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯಕ್ಕೆ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 2,101 ಮಂದಿಯನ್ನು ಉಭಯ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ 158 ಮತಗಟ್ಟೆಗಳಿದ್ದು, 174 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು 174 ಮತಗಟ್ಟೆ ಅಧಿಕಾರಿಗಳು, 174 ಮೈಕ್ರೋ ಅಬ್ಸರ್ವರ್, 174 ಗ್ರೂಪ್ ಡಿ ನೌಕರರನ್ನು ನಿಯೋಜಿಸಲಾಗುತ್ತಿದೆ. ಪ್ರತೀ ವಿಭಾಗದಲ್ಲಿ ಮೀಸಲು 10 ಸಿಬ್ಬಂದಿಯಾಗಿ ಕಾದಿರಿಸಲಾಗಿದೆ.158 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಚುನಾವಣೆ ಮುನ್ನಾ ದಿನವಾದ ಇಂದು ಮತಗಟ್ಟೆಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ.ಉಡುಪಿಯಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತದಾನ ಕೇಂದ್ರದ ಸಿದ್ಧತೆ ವೀಕ್ಷಿಸಿದರು.
Kshetra Samachara
09/12/2021 12:23 pm