ಉಡುಪಿ: ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕಳೆದ ಭಾನುವಾರ ಪ್ರಾರಂಭಗೊಂಡಿದೆ. ಅದೇ ರೀತಿ ಮುಂದಿನ 14 , 21 ಮತ್ತು 28ನೇ ಭಾನುವಾರ ಈ ಅಭಿಯಾನ ಮುಂದುವರೆಯಲಿದೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಡುಪಿ ಡಿ.ಸಿ. ಕೂರ್ಮಾ ರಾವ್ ಹೇಳಿದ್ದಾರೆ.
ಇವತ್ತು ರಜತಾದ್ರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ , ಈ ನಾಲ್ಕು ಭಾನುವಾರಗಳಂದು ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳಲ್ಲಿ ಲಭ್ಯರಿರುತ್ತಾರೆ. ಸಾರ್ವಜನಿಕರು ಹೆಸರು ಸೇರ್ಪಡೆ, ಹೆಸರು ತೆಗೆಯುವುದು, ಆಕ್ಷೇಪಣೆ ಸಲ್ಲಿಸುವುದು, ತಪ್ಪುಗಳಿದ್ದರೆ ಸರಿ ಪಡಿಸುವ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ರಜಾ ದಿನವಾಗಿರುವುದರಿಂದ ಭಾನುವಾರ ಈ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಇಟ್ಟಿದ್ದೇವೆ ಎಂದರು.
Kshetra Samachara
09/11/2021 04:03 pm