ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಯೋಜನೆಗಳಲ್ಲಿ ಅಕ್ರಮ ಎಸಗಿದ ಪಂಚಾಯತ್ ಸದಸ್ಯರ ರಾಜೀನಾಮೆಗೆ ಒತ್ತಾಯ

ಸರಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಿದ ಆರೋಪದ ಮೇಲೆ ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸವಿತಾ ಸಸಿಹಿತ್ಲು ಹಾಗೂ ಸುಕೇಶ್ ಪಾವಂಜೆ ರಾಜೀನಾಮೆ ನೀಡಬೇಕು ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಹಳೆಯಂಗಡಿಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಮಾತನಾಡಿ ಮನೆ ಕಟ್ಟಲು ಸಿಗುವ ಸರಕಾರದ ಯೋಜನೆಗಳನ್ನು ಇಬ್ಬರು ಸದಸ್ಯರು ಪೋರ್ಜರಿ ಮಾಡಿ ದುರುಪಯೋಗಪಡಿಸಿಕೊಂಡಿದ್ದಾರೆ

ಅವರು ಮಾಡಿದ ಅಕ್ರಮಗಳ ಬಗ್ಗೆ ಸಾಕ್ಷಿ ಇದ್ದು ನಾವು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದು ಎಚ್ಚರಗೊಂಡ ಅಧಿಕಾರಿಗಳು ಸವಲತ್ತನ್ನು ವಾಪಸ್ ಪಡೆದುಕೊಂಡಿದ್ದಾರೆ. ಕೂಡಲೇ ಅಕ್ರಮ ಎಸಗಿದ ಇಬ್ಬರು ಪಂಚಾಯತ್ ಸದಸ್ಯರು ತಮ್ಮ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಹಳೆಯಂಗಡಿ ಗ್ರಾಮ ಮಾಜಿ ಅಧ್ಯಕ್ಷ ವಸಂತ್ ಬೆರ್ನಾಡ್ ಮಾತನಾಡಿ ಪಂಚಾಯತ್ ಸದಸ್ಯರ ಅಕ್ರಮಗಳ ಬಗ್ಗೆ ಬಿಜೆಪಿ ಶಾಸಕರು ಹಾಗೂ ಪಂಚಾಯತ್ ಅಧ್ಯಕ್ಷರು ಯಾಕೆ ಮೌನವಾಗಿದ್ದಾರೆ? ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪಂಚಾಯತ್ ನಲ್ಲಿ ಕಾಂಗ್ರೆಸಿಗೆ 12 ಸದಸ್ಯರ ಬೆಂಬಲ ಇದ್ದು ಅಧ್ಯಕ್ಷರು ಬಹುಮತ ಸಾಬೀತು ಪಡಿಸಲಿ ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.

ಪಂಚಾಯತ್ ಸದಸ್ಯ ಚಂದ್ರಕುಮಾರ್ ಮಾತನಾಡಿ ತನಗೆ ತಾಯಿ ಹೆಸರಲ್ಲಿ ಮನೆ ಕಟ್ಟಲು ಹಣ ನ್ಯಾಯಯುತವಾಗಿ ಮಂಜೂರಾತಿಯಾಗಿದ್ದು ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಜಿಪಂ ಸದಸ್ಯ ವಿನೋದ್ ಬೊಳ್ಳೂರು ಹಾಗೂ ಸ್ಥಳೀಯ ಪಂಚಾಯತ್ ಸದಸ್ಯೆ ಸವಿತಾ ಅಡ್ಡ ಕಾಲು ಹಾಕಿದ್ದು ಅವ್ಯವಹಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಕ್ರಮ ಮಾಡಿದ ಇಬ್ಬರು ಪಂಚಾಯತ್ ಸದಸ್ಯರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು

ಪತ್ರಿಕಾಗೋಷ್ಠಿಯಲ್ಲಿ ಹಳೆಯಂಗಡಿ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Edited By :
PublicNext

PublicNext

09/09/2022 01:01 pm

Cinque Terre

42.94 K

Cinque Terre

3

ಸಂಬಂಧಿತ ಸುದ್ದಿ