ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ; ಸಮಾವೇಶ ಮೈದಾನದತ್ತ ಜನಸಾಗರ

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ದ.ಕ. ಜಿಲ್ಲೆಯ ಜನರು ತಮ್ಮ ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು, ಅವರ ಮಾತನ್ನು ಆಲಿಸಲು ಕಾತರರಾಗಿ ಬೆಳಗ್ಗಿನಿಂದಲೇ ಸಮಾವೇಶ ನಡೆಯುತ್ತಿರುವ ಬಂಗ್ರಕೂಳೂರಿನ ಮೈದಾನಕ್ಕೆ ಆಗಮಿಸುತ್ತಿದ್ದಾರೆ.

ಸಮಾವೇಶ ನಡೆಯುವ ಮೈದಾನಕ್ಕೆ ಬೆಳಗ್ಗೆ 10 ಗಂಟೆಯಿಂದಲೇ ಜನಸಾಗರ ಹರಿದು ಬರುತ್ತಿದ್ದು, ಸಭಾಂಗಣ ಭರ್ತಿಯಾಗುತ್ತಿದೆ. ಪ್ರಧಾನಿಯವರ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಬಿಗಿ ಬಂದೋಬಸ್ತು ವ್ಯವಸ್ಥೆ ಕಲ್ಪಿಸಲಾಗಿದೆ.

ವೇದಿಕೆಯತ್ತ ಆಗಮಿಸುವವರನ್ನು ಭದ್ರತಾ ಪಡೆ ಸಿಬ್ಬಂದಿ ಸಂಪೂರ್ಣ ತಪಾಸಣೆ ಮಾಡಿಯೇ ಒಳಗೆ ಕಳುಹಿಸುತ್ತಿದ್ದಾರೆ. ಬೆಂಕಿಪೊಟ್ಟಣ, ಲೈಟರ್, ಕಪ್ಪುಬಟ್ಟೆ, ಕರಪತ್ರ ಯಾರೂ ತರದಿರುವಂತೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಕಠಿಣ ತಪಾಸಣೆ ನಡೆಸಲಾಗುತ್ತಿದೆ.

Edited By :
PublicNext

PublicNext

02/09/2022 01:22 pm

Cinque Terre

35.37 K

Cinque Terre

0

ಸಂಬಂಧಿತ ಸುದ್ದಿ