ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಟೋಲ್ ಸಂಗ್ರಹ ಪಾರ್ಟಿ ಫಂಡ್ ಗೆ ಹಣ ಕಲೆಕ್ಷನ್ ಮಾಡುವ ಗೇಟ್"

ಟೋಲ್ ಸಂಗ್ರಹ ಪಾರ್ಟಿ ಫಂಡ್ ಗೆ ದುಡ್ಡು ಕಲೆಕ್ಷನ್ ಮಾಡುವ ಗೇಟ್ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಗಂಭೀರ ಆರೋಪ ಮಾಡಿದರು.

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಟೋಲ್ ಗೇಟ್ ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರದ ಕೂಪವಾಗಿ ಪರಿವರ್ತನೆ ಆಗುತ್ತಿದೆ. ಸಾರ್ವಜನಿಕರಿಂದ ಟೋಲ್ ಸಂಗ್ರಹಿಸಿದ ಹಣದಿಂದ ರಸ್ತೆ ನಿರ್ಮಾಣವಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡುವುದಿಲ್ಲ. ಆದ್ದರಿಂದ ಟೋಲ್ ಸಂಗ್ರಹ ವಿಚಾರದಲ್ಲಿ ಪಾರದರ್ಶಕತೆಯಿಲ್ಲ.

ಹೊಸ ರಸ್ತೆಗೆ ಕೊಡುವ ಟೋಲ್ ದರವನ್ನೇ ನಿರ್ವಹಣೆಗೂ ವಸೂಲಿ ಮಾಡಲಾಗುತ್ತದೆ. ಈ ಮೂಲಕ ಇಡೀ ದೇಶದಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತದೆ. ಟೋಲ್ ಕೊಡಲು‌ ನಾವು ತಯಾರಿದ್ದೇವೆ. ಆದರೆ, ಸರಕಾರ ರಸ್ತೆ ಕಾಮಗಾರಿಗೆ ಎಷ್ಟು ಖರ್ಚು ಮಾಡಿದೆ. ಸುಂಕ ವಸೂಲಾತಿ ಎಷ್ಟು ಮಾಡಲಾಗಿದೆ. ಟೋಲ್ ಗೇಟ್ ಯಾವಾಗ ಮುಚ್ಚುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಆದರೆ, ಯಾವುದೇ ಟೋಲ್ ಗೇಟ್ ಬಂದ್ ಆಗುವುದಿಲ್ಲ‌. ಆದ್ದರಿಂದ ಟೋಲ್ ಸಂಗ್ರಹ ಮಾಫಿಯಾ ಆಗಿ ಬೆಳೆಯುತ್ತಿದೆ. ಆದ್ದರಿಂದ ತಕ್ಷಣ ಸುರತ್ಕಲ್ ಟೋಲ್ ಗೇಟ್ ತೆರವು ಆಗಲಿ ಎಂದು ಎಂ.ಜಿ.ಹೆಗಡೆ ಆಗ್ರಹಿಸಿದರು.

Edited By :
PublicNext

PublicNext

26/08/2022 07:17 pm

Cinque Terre

33.66 K

Cinque Terre

6

ಸಂಬಂಧಿತ ಸುದ್ದಿ