185 ಹೆಕ್ಟೇರ್ ಕೃಷಿ ಭೂಮಿ, 12 ಎಕರೆ ತೋಟ ಹಾಳಾಗಿದೆ, ಎಂಟು ಸಾವು ಆಗಿದೆ. ಆದ್ರೆ ಉಸ್ತುವಾರಿ ಸಚಿವರು ಮೈಮರೆತಿದ್ದಾರೆ ಎಂದು ಮಾಜಿ ಎಂಎಲ್ ಸಿ ಹರೀಶ್ ಕುಮಾರ್ ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಗೆ ಒಂದು ಸುತ್ತು ಹೊಡೆದರೆ ವಸ್ತುಸ್ಥಿತಿ ತಿಳಿಯಬಹುದು. ಯಡಿಯೂರಪ್ಪ 2019 ರಲ್ಲಿ ಸ್ಪಂದನೆ ಕೊಡದಿದ್ದರೂ ಏಕಾಂಗಿ ಹೋರಾಟ ಮಾಡಿದ್ದರು. ಆನಂತರ ಸಂಪುಟ ಸರ್ಕಸ್ ಮಾಡಿದ್ದರು. ಮಳೆಯಿಂದ ಜನ ಕಂಗಾಲಾದ್ರೂ ಉಸ್ತುವಾರಿ ಸಚಿವರು ಸ್ಥಳಕ್ಕೆ ತೆರಳಿಲ್ಲ. ಇವತ್ತು ಸಿಎಂ ಒಬ್ಬರೇ ನೆರೆ ವೀಕ್ಷಣೆಗೆ ತೆರಳುತ್ತಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಗೆ ಕನಿಷ್ಠ ನೂರು ಕೋಟಿ ಪರಿಹಾರ ನೀಡಬೇಕು. ದುರಂತದಲ್ಲಿ ಮಡಿದವರಿಗೆ ಪರಿಹಾರ ನೀಡಬೇಕು. ಶಾಲಾ ಕಟ್ಟಡ ಹಾಳಾದಲ್ಲಿ ದುರಸ್ತಿ ಮಾಡಬೇಕು. 2021 ರಲ್ಲಿ 841 ಕೋಟಿ ಕೇಳಿದ್ರೆ 500 ಕೋಟಿ ಮಾತ್ರ ಅನುದಾನ ಕೊಟ್ಟಿದ್ದರು. ಏಳೆಂಟು ಸಾವಿರ ನಷ್ಟ ಆಗಿದ್ದರೆ, ಕನಿಷ್ಠ ಅರ್ಧವನ್ನೂ ಕೇಂದ್ರ ಸರಕಾರ ನೀಡಿಲ್ಲ ಎಂದು ಆರೋಪಿಸಿದ್ರು.
ಬಿಜೆಪಿಯ 25 ಸಂಸದರಿದ್ದಾರೆ, ಡಬಲ್ ಇಂಜಿನ್ ಸರ್ಕಾರ ಇದೆ ಎಂದ ಅವರು, ಮುಖ್ಯಮಂತ್ರಿ ಒನ್ ಮೆನ್ ಶೋ ಮಾಡುತ್ತಿದ್ದಾರೆ. ಯಾವುದೇ ಸಚಿವರು ಮನ್ನಣೆ ಕೊಡುತ್ತಿಲ್ಲ, ಸರಕಾರ ಕಾಳಜಿ ವಹಿಸುತ್ತಿಲ್ಲ. ಮಳೆಗಾಲ ಬರುವ ವೇಳೆಗೆ ಮುಂಜಾಗ್ರತೆ ವಹಿಸಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
PublicNext
12/07/2022 04:03 pm