ಮುಲ್ಕಿ: ಮುಲ್ಕಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮುಲ್ಕಿ ತಾಲೂಕು ನ.23 ರಂದು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ. ಅವರು ಕಿನ್ನಿಗೋಳಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ಈಗಾಗಲೇ ಮುಲ್ಕಿ ತಾಲೂಕು ರಚನೆ ಪ್ರಕ್ರಿಯೆ ಮುಗಿದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಮುಲ್ಕಿ ತಾಲೂಕು ರಚನೆಗೆ 30 ಗ್ರಾಮಗಳು ಸೇರಲಿದ್ದು, ಜಿಲ್ಲಾಧಿಕಾರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ. ಬಳಿಕ ಮುಲ್ಕಿಯಲ್ಲಿ ತಾಲೂಕು ಮಟ್ಟದ ಎಲ್ಲಾ ಕಚೇರಿಗಳು ಆರಂಭಗೊಳ್ಳಲಿದೆ ಎಂದರು.
Kshetra Samachara
21/11/2020 10:13 am