ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ 'ಅದಾನಿ ಏರ್ ಪೋರ್ಟ್' ಹೆಸರನ್ನು ಕೋಟಿ- ಚೆನ್ನಯ ಏರ್ ಪೋರ್ಟ್ ಹೆಸರಿನಡಿ ಮರು ನಾಮಕರಣಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮೂರನೇ ಹಂತದ ಹೋರಾಟಕ್ಕೆ ಮುಂದಾಗಿದೆ. ನಾಳೆ ನಗರದ ಸರ್ಕ್ಯೂಟ್ ಹೌಸ್ ನಿಂದ ವಿಮಾನ ನಿಲ್ದಾಣ ಪ್ರವೇಶವಿರುವ ಬಜ್ಪೆಯ ಕೆಂಜಾರು ತನಕ ಪಂಜಿನ ಮೆರವಣಿಗೆ ನಡೆಸುವುದಾಗಿ ದ.ಕ. ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಜಿನ ಮೆರವಣಿಗೆಯಲ್ಲಿ ಮಾಜಿ ಸಚಿವರು, ಜಿಲ್ಲಾ ಮಟ್ಟದ ನಾಯಕರು ಹಾಗೂ 500ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕೋಟಿ- ಚೆನ್ನಯ ಹೆಸರಿಡುವ ತನಕ ನಮ್ಮ ಹೋರಾಟ ಮುಂದುವ ರಿಯಲಿದೆ. ಯಾವುದೇ ಕಾರಣಕ್ಕೂ ಅದಾನಿ ಏರ್ ಪೋರ್ಟ್ ಅನ್ನೋದನ್ನು ನಾವು ಸಹಿಸಲಾರೆವು. ಮುಂದಿನ ದಿನಗಳಲ್ಲಿ ಇತರ ಪಕ್ಷಗಳ ಜೊತೆಗೂ ಚರ್ಚಿಸಿ ಹೋರಾಟ ಕೈಗೆತ್ತಿಕೊಳ್ಳುವೆವು. ಅಲ್ಲದೆ, ಅಗತ್ಯ ಬಿದ್ದರೆ ಉಗ್ರ ಹೋರಾಟಕ್ಕೂ ನಾವು ಬದ್ಧರಾಗಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ವಸಂತ್ ಬೆರ್ನಾರ್ಡ್ ಉಪಸ್ಥಿತರಿದ್ದರು.
Kshetra Samachara
17/11/2020 05:16 pm