ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಸಿಎಂ ಬೊಮ್ಮಾಯಿಗೆ ಅಳಲು ತೋಡಿಕೊಂಡ ಅನ್ನದಾತರು

ಸುಳ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಅರ್ಪಿಸಲಾಯಿತು. ಸಚಿವ ಎಸ್.ಅಂಗಾರ ಹಾಗು ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಮನವಿ ಅರ್ಪಿಸಲಾಯಿತು.

ಜಿಲ್ಲೆಯ ಅಡಿಕೆ ಹಳದಿ ರೋಗ ಸಮಸ್ಯೆ ನಿವಾರಣೆಗೆ ಸಂಬಂಧಿಸಿ 2021-22ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ 25 ಕೋಟಿ ಧನಸಹಾಯವನ್ನು ಬಿಡುಗಡೆಗೊಳಿಸಬೇಕು ಮತ್ತು ಮತ್ತು ಅಡಿಕೆ ಹಳದಿ ರೋಗ ಭಾದಿತ ರೈತರ ಸಾಲಮನ್ನಾ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು. ಹಲವಾರು ಗ್ರಾಮಗಳಲ್ಲಿ ಅಡಿಕೆಗೆ ರೋಗ ವ್ಯಾಪಿಸುತ್ತಿದ್ದು ರೈತರು ಬಹಳ ವರ್ಷಗಳಿಂದ ಆರ್ಥಿಕ ಸಂಕಷ್ಟ ಪಡುತ್ತಿದ್ದಾರೆ. ರೈತರು ತಮ್ಮ ಭೂಮಿಗೆ ಮಾಡಿದ ಸಾಲವನ್ನು ಕಟ್ಟಲಾಗದೆ ಮತ್ತು ದೈನಂದಿನ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ.ಸರಕಾರ ಬಜೆಟ್‌ನಲ್ಲಿ 25 ಕೋಟಿ ಘೋಷಣೆ ಮಾಡಿದ್ದರೂ ಈವರೆಗೆ ರೈತರಿಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ . ಆದುದರಿಂದ ತಾವುಗಳು ಆದಷ್ಟು ಶೀಘ್ರದಲ್ಲಿ ಮಂಜೂರಾದ ಹಣವನ್ನು ರೈತರಿಗೆ ಪರಿಹಾರಧನ ರೂಪದಲ್ಲಿ ಬಿಡುಗಡೆಗೊಳಿಸಿ ರೈತರ ಸಂಕಷ್ಟಕ್ಕೆ ನೆರವಾಗಬೇಕು ಮತ್ತು ಸಂಕಷ್ಟಕ್ಕೊಳಗಾದ ರೈತರ ಸಾಲವನ್ನು ಮನ್ನಾ ಮಾಡಿ ಅವರನ್ನು ಋಣ ಮುಕ್ತರನ್ನಾಗಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ

ಪ್ಲಾಟಿಂಗ್ ಸಮಸ್ಯೆ ಪರಿಹರಿಸಿ:

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 2012 ರ ಆದೇಶದನ್ವಯ ರೈತರಿಗೆ ಉಂಟಾಗಿರುವ ಪ್ಲಾಟಿಂಗ್ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಅಕ್ರಮ-ಸಕ್ರಮ ಭೂಮಂಜೂರಾತಿ ಯೋಜನೆಯಡಿಯಲ್ಲಿ ನಮೂನೆ 50,53 ಮತ್ತು 57 ರಲ್ಲಿ ಮಂಜೂರಾದ ಎಲ್ಲಾ ರೈತರ ಭೂಮಿಯು 2012 ರ ಆದೇಶದನ್ವಯ ಪ್ಲಾಟಿಂಗ್‌ ಮಾಡಲು ಸಮಸ್ಯೆಯಾಗಿದ್ದು, ರೈತರಿಗೆ ತಮ್ಮ ಭೂಮಿಯ ಯಾವುದೇ ಕೃಷಿ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆ ಆಗಿದೆ. ಸುಳ್ಯ ತಾಲೂಕು ಭೂ ದಾಖಲೆಗಳ ಕಛೇರಿಯಲ್ಲಿ 8000 ಕ್ಕೂ ಅಧಿಕ ಕಡತಗಳು ಬಾಕಿ ಉಳಿದಿರುತ್ತದೆ . ಆದುದರಿಂದ ಏಕವ್ಯಕ್ತಿ ಅಡಿಯಲ್ಲಿ ಪ್ಲಾಟಿಂಗ್‌‌ ಮಾಡಲು ಅವಕಾಶವಾಗುವಂತೆ 1 ರಿಂದ 5 ರವರೆಗಿನ ನಿಯಮಕ್ಕೆ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಕಾಮಗಾರಿಯ ಮೂರನೇ ಹಂತದ ಕಾಮಗಾರಿಗೆ ಕ್ಯಾಬಿನೆಟ್‌ನಲ್ಲಿ ಅಂಗೀಕಾರ ನೀಡಬೇಕು ಎಂದು ಮನವಿ‌‌ ಅರ್ಪಿಸಲಾಯಿತು.

ರಾಜ್ಯ ಹೆದ್ದಾರಿ -85 ಜಾಲ್ಕೂರು – ಸುಬ್ರಹ್ಮಣ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.

Edited By : Nagaraj Tulugeri
PublicNext

PublicNext

13/07/2022 11:20 am

Cinque Terre

15.24 K

Cinque Terre

0

ಸಂಬಂಧಿತ ಸುದ್ದಿ