ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಲ್ಲಿಗೆ ಹೋಯಿತು? ಎಂಬುದು ಯಾರಿಗೂ ಗೊತ್ತಿಲ್ಲ.ಅದರಲ್ಲಿ ರಾಜ್ಯಕ್ಕೆ ಬಂದ ಪಾಲು ಎಷ್ಟು ಎಂಬುದೂ ಯಾರಿಗೂ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋ ಷ್ಠಿ ನಡೆಸಿದ ಬಿ.ಕೆ. ಹರಿಪ್ರಸಾದ್ , ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹತ್ತು ಪೈಸೆ ಬೆಲೆ ಏರಿಕೆ ಆದರೂ, ಭಾಷಣ ಬಿಗಿಯುತ್ತಾ ಇದ್ದರು. ಆದರೆ, ಅವರು ಘೋಷಿಸಿದ ಪ್ಯಾಕೇಜ್ ಹಾಸ್ಯಾಸ್ಪವಾಗಿದೆ.ಅವರಿಗೆ ಆಡಳಿತ ನಡೆಸುವ ನೈತಿಕತೆಯೇ ಇಲ್ಲ ಎಂದರು.
ಈ ಹಿಂದೆ ಬಿಜೆಪಿಯವರು ಪದೇ ಪದೆ ಕಾಂಗ್ರೆಸ್ ಎಪ್ಪತ್ತು ವರ್ಷ ಆಡಳಿತ ಮಾಡಿದೆ ಎನ್ನುತ್ತಿದ್ದರು.ಕ್ರಮೇಣ ನೆಹರೂ ಕಾರಣ ಎನ್ನುತ್ತಿದ್ದರು.ಆದರೆ ಈಗ ಎಲ್ಲದಕ್ಕೂ ದೇವರ ಮೇಲೆ ಹಾಕುತ್ತಿದ್ದಾರೆ.ಶ್ರೀರಾಮುಲು, ನಿರ್ಮಲಾ ಸೀತಾರಾಮನ್ ಏನು ಕೇಳಿದರೂ ದೇವರು ಕಾರಣ ಎನ್ನುವುದು ಹಾಸ್ಯಾಸ್ಪದವಾಗಿದೆ. ಇವರಿಗೆ ತಳಮಟ್ಟದಲ್ಲಿ ಜನರು ಯಾವ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ಅರಿವಿಲ್ಲ ಎಂದು ಹೇಳಿದರು
Kshetra Samachara
15/10/2020 06:16 pm