ಕಾಪು : ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ ಬೈಕ್ ಜಾಥವನ್ನು ಜಿಲ್ಲಾ ಗಡಿಭಾಗ ಹೆಜಮಾಡಿಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಿಥುನ್ ರೈ. ಧ್ವಜ ಬೀಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸೊರಕೆ, ಬೈಕ್ ಜಾಥ ಇಂದು ಹೆಜಮಾಡಿಯಿಂದ ಹೊರಟು ಉದ್ಯಾವರದಲ್ಲಿ ಸಮಾಪನಗೊಳ್ಳಲಿದ್ದು, ನಾಳೆ ಮಧ್ಯಾಹ್ನ 3ಗಂಟೆಗೆ ಕುಕ್ಕಿ ಕಟ್ಟೆಯಿಂದ ಹೊರಟು ವಿವಿಧ ಕಡೆಯಾಗಿ ಸಾಗಿ ಅಲೆವೂರಿನಲ್ಲಿ ಈ ಬೈಕ್ ಜಾಥ ಸಮಾಪನ ಗೊಳ್ಳಲಿದೆ ಎಂದರು. ಇದರ ಉದ್ಧೇಶವೊಂದೆ ಸ್ವಾತಂತ್ರ್ಯದ 75 ವರ್ಷವನ್ನು ಬಹಳ ಅದ್ಧೂರಿಯಾಗಿ ಮನೆಮನೆಗಳಲ್ಲಿ ನಮ್ಮ ದೇಶದ ಧ್ವಜವನ್ನು ಹಾರಿಸುವ ಮೂಲಕ ಎಲ್ಲರೂ ಸಂಭ್ರಮಿಸ ಬೇಕೆಂದರು.
ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಶೆಟ್ಟಿ, ವೈ. ಸುಧೀರ್ ಕುಮಾರ್, ವೈ. ಸುಕುಮಾರ್, ಬೆಳಪು ದೇವಿಪ್ರಸಾದ್ ಶೆಟ್ಟಿ ಮುಂತಾದವರಿದ್ದರು.
Kshetra Samachara
13/08/2022 06:45 pm