ಕುಂದಾಪುರ: ಕೋಟದ ವಿವೇಕ ಬಾಲಕರ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಇಂದು ನಡೆಯಿತು.ಬೆಳಿಗ್ಗೆ 9.30 ರಿಂದ 12.30 ರ ವರೆಗೆ ನಡೆದ ಚುನಾವಣೆಯಲ್ಲಿ1600 ವಿದ್ಯಾರ್ಥಿಗಳು ಭಾಗಿಯಾದರು.ಇವಿಎಂ ಮೊಬೈಲ್ ಆ್ಯಪ್ ಮೂಲಕ ಚುನಾವಣೆ ಪ್ರಕ್ರಿಯೆ ನಡೆದದ್ದು ಈ ಬಾರಿಯ ವಿಶೇಷವಾಗಿತ್ತು.
ಮೊದಲು ಪ್ರತಿ ತರಗತಿಯಲ್ಲಿಯೂ ಆಯಾ ತರಗತಿಯ ಮುಖಂಡರ ಆಯ್ಕೆ ನಡೆದು ನಂತರ ವಿದ್ಯಾರ್ಥಿ ಮುಖಂಡ ಮತ್ತು ಉಪ ಮುಖಂಡರ ಆಯ್ಕೆ ಜರುಗಿತು.ದ್ವಿತೀಯ ಪಿಯುಸಿ ವಿದ್ಯಾರ್ಥಿ ಶ್ರೀಶ ನಾಯಕ್- ವಿದ್ಯಾರ್ಥಿ ಮುಖಂಡನಾಗಿ ಆಯ್ಕೆಯಾದರೆ,ವಿವೇಕ ಪ್ರೌಢಶಾಲೆಯ ಕೇಶವ ಉಪಾಧ್ಯ- ವಿದ್ಯಾರ್ಥಿ ಉಪಮುಖಂಡರಾಗಿ ಆಯ್ಕೆಯಾದರು.ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು ಈ ಬಾರಿಯ ವಿಶೇಷ.
ಮುಖ್ಯ ಚುನಾವಣಾ ಅಧಿಕಾರಿಯಾಗಿ ಪ್ರಾಂಶುಪಾಲರಾದ ಕೆ ಜಗದೀಶ ನಾವಡ ಮತ್ತು ಚುನಾವಣಾ ಅಧಿಕಾರಿಯಾಗಿ ಅರ್ಥಶಾಸ್ತ್ರ ಉಪನ್ಯಾಸಕ ಗಣೇಶ ಕುಮಾರ್ ಶೆಟ್ಟಿ ಕಾರ್ಯನಿರ್ವಹಿಸಿದರು. ಉಪಚುನಾವಣಾ ಅಧಿಕಾರಿಯಾಗಿ ಬಾಲಕರ ಪ್ರೌಢಶಾಲೆಯ ಆಧ್ಯಾಪಕಿ ಶ್ರೀಮತಿ ರತಿಬಾಯಿ, ಬಾಲಕರ ಪ್ರೌಢಶಾಲೆಯ ಮುಖ್ಯಸ್ಥ ವೆಂಕಟೇಶ ಉಡುಪ, ಉಪನ್ಯಾಸಕ ವೃಂದ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಲು ಸಹಕರಿಸಿದರು.
Kshetra Samachara
25/06/2022 11:18 pm