ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ತಾಕತ್ತು ಇದ್ದರೆ ರೋಹಿತ್ ಚಕ್ರತೀರ್ಥಗೆ ಸನ್ಮಾನ ಮಾಡಲಿ"

ಮಂಗಳೂರು: ಬಿಜೆಪಿಗೆ ಪಠ್ಯಪುಸ್ತಕ ವಿಚಾರದಲ್ಲಿ ಗೊಂದಲ ನಿವಾರಣೆ ಬೇಕಾಗಿಲ್ಲ‌. ಅವರು ಮತ್ತಷ್ಟು ಬೆಂಕಿಗೆ ತುಪ್ಪ ಸುರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಪಠ್ಯಪುಸ್ತಕ ವಿಚಾರದಲ್ಲಿ ರೋಹಿತ್ ಚಕ್ರತೀರ್ಥರ ಹೆಸರು ವಿವಾದಾತ್ಮಕವಾಗಿ ಕೇಳಿ ಬಂದಿದ್ದರೂ, ಅವರನ್ನು ಮಂಗಳೂರಿಗೆ ಕರೆಸಿ ಸನ್ಮಾನ ಮಾಡುವಂತಹ ದುಷ್ಕೃತ್ಯ ಖಂಡನೀಯ ಎಂದು ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಉದ್ದೇಶ ಪೂರ್ವಕವಾಗಿ ಚಕ್ರತೀರ್ಥರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಸ್ಥಳೀಯ ಶಾಸಕ, ಬಿಜೆಪಿ ನೇರ ಹೊಣೆ. ಇವರಿಗೆ ಎದೆಗಾರಿಕೆ, ತಾಕತ್ತು ಇದ್ದರೆ ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಲಿ. ನಾವೂ ಸನ್ಮಾನ ಮಾಡುವ ವ್ಯವಸ್ಥೆ ಮಾಡಿದ್ದೆವು ಎಂದು ಕಿಡಿಕಾರಿದರು.

ಪಠ್ಯಪುಸ್ತಕ ವಿಚಾರದಲ್ಲಿ ಸೃಷ್ಟಿಸಿರುವ ಗೊಂದಲಕ್ಕೆ ಸರಕಾರ ಸ್ಪಷ್ಟ ಉತ್ತರ ಕೊಡುತ್ತಿಲ್ಲ. ಅದನ್ನು ಒಂದು ಹಂತಕ್ಕೆ ತಲುಪಿಸುವಲ್ಲಿಯೂ ವಿಫಲವಾಗಿದೆ. ಅನೇಕ ಪಠ್ಯಗಳನ್ನು ಸರಕಾರ ಬದಲಾವಣೆ ಮಾಡಿದೆ. ಸರಕಾರದ ಒಬ್ಬೊಬ್ಬರು ಒಂದೊಂದು ಉತ್ತರ ಕೊಡುತ್ತಾರೆ. ಯಾವುದರಲ್ಲೂ ಸ್ಪಷ್ಟತೆಯಿಲ್ಲ.

ಪಠ್ಯಪುಸ್ತಕ ಬಿಡುಗಡೆಯಾದರೂ ಇನ್ನೂ ವಿತರಣೆಯಾಗಿಲ್ಲ. ಸಿಎಂ ಪಠ್ಯಪುಸ್ತಕವನ್ನು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಪಠ್ಯಪುಸ್ತಕ ಬಿಡುಗಡೆ ಆದ ಬಳಿಕ ಯಾವ ರೀತಿ ಸರಿಪಡಿಸಲು ಸಾಧ್ಯ. ಆದ್ದರಿಂದ ಇವರು ಎಸಗಿರುವ ತಪ್ಪನ್ನು ನಾವು ಖಂಡಿಸುತ್ತೇವೆ ಎಂದು ಹರೀಶ್ ಕುಮಾರ್ ಹೇಳಿದರು.

Edited By : Manjunath H D
PublicNext

PublicNext

25/06/2022 04:45 pm

Cinque Terre

44.16 K

Cinque Terre

1

ಸಂಬಂಧಿತ ಸುದ್ದಿ