ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ:EVM ಮತ್ತು ಬ್ಯಾಲೆಟ್ ಪೇಪರ್ ಮೂಲಕ ಶಾಲಾ ಮಕ್ಕಳಿಗೆ ಮತದಾನದ ಅರಿವು !

ನೆಲ್ಯಾಡಿ: ಮಕ್ಕಳಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ನೆಲ್ಯಾಡಿ ಬೆಥನಿ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿ ಮಂಡಲದ ಚುನಾವಣೆ ನಡೆಯಿತು.

2022-23ನೇ ಸಾಲಿನ ಈ ಶಾಲಾ ಮಂತ್ರಿ ಮಂಡಲ ಚುನಾವಣೆ ಕೇಂದ್ರ ಮತ್ತು ರಾಜ್ಯ ಸರಕಾರದ ಮಂತ್ರಿ ಮಂಡಲ ರಚನೆಯ ಪರಿಕಲ್ಪನೆ ಮೂಡಿಸುವ ರೀತಿಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಮತದಾನದ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸುವ ಸಲುವಾಗಿ ಬ್ಯಾಲೆಟ್ ಪೇಪರ್ ಮತ್ತು ಈ.ವಿ.ಎಮ್ ಯಂತ್ರದ ಮೂಲಕ ಈ ಮತದಾನ ನಡೆಯಿತು.

ಮತದಾನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಹಾಗೂ ಮತ ಹಾಕುವ ರೀತಿ, ಮತ ಎಣಿಕೆಯ ಪ್ರಕ್ರಿಯೆ, ಎಲೆಕ್ಷನ್ ಕಮ್ಮೀಷನ್ ಬಗ್ಗೆ ಶಾಲಾ ಪ್ರಿನ್ಸಿಪಾಲ್ ರೆ.ಫಾ. ತೋಮಸ್ ಬಿಜಿಲಿ ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿ, ಮತದಾನ ಪ್ರಕ್ರಿಯೆಗೆ ಸಹಕರಿಸಿದರು.

ಶಾಲಾ ಪ್ರಧಾನ ಮಂತ್ರಿಯಾಗಿ 210 ಮತಗಳೊಂದಿಗೆ ರಾಯಲ್ ಬಿನೋಯ್ ಆಯ್ಕೆಯಾದರೆ,158 ಮತಗಳೊಂದಿಗೆ ಜೀನಾ ಎ.ಕೆ ಗೃಹಮಂತ್ರಿಯಾಗಿ ಆಯ್ಕೆಯಾದರು. ಇನ್ನುಳಿದಂತೆ 9 ಮಂತ್ರಿಗಳ 16 ಮಂದಿ ಮಕ್ಕಳ ಮಂತ್ರಿ ಮಂಡಲ ರಚನೆಯಾಯಿತು.

Edited By :
Kshetra Samachara

Kshetra Samachara

16/06/2022 08:54 am

Cinque Terre

5.23 K

Cinque Terre

1

ಸಂಬಂಧಿತ ಸುದ್ದಿ