ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ವಿಚಾರ ಪ್ರತ್ಯೇಕ ಕಾಲೇಜು ತೆರೆಯುವುದು ಸರಿಯಲ್ಲ: ಯಶ್ ಪಾಲ್ ಸುವರ್ಣ

ಉಡುಪಿ: ಹಿಜಾಬ್ ವಿವಾದ ರಾಷ್ಟ್ರದಲ್ಲೇ ಸುದ್ದಿಯಾಗಿ ಕೋರ್ಟ್ ಮೆಟ್ಟಿಲೇರಿ ಸದ್ಯ ಕೋರ್ಟ್ ಹಿಜಾಬ್ ಧರಿಸಿ ಪಾಠ ಕೇಳುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ. ಆದರೂ ಕೆಲವೊಂದು ಕಡೆ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ, ಹಿಜಾಬ್ ಧರಿಸಿಯೇ ಪಾಠ ಕೇಳುವುದಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದ ಉಡುಪಿ ಜಿಲ್ಲೆಯ ಮುಸಲ್ಮಾನರು ತಮ್ಮ ಮಕ್ಕಳಿಗಾಗಿ ಪ್ರತ್ಯೇಕ ಪಿಯು ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದ್ದಾರೆ.

ಜಿಲ್ಲೆಯ ಒಕ್ವಾಡಿಯಲ್ಲಿ ಐಬಿಟಿ ಗಾರ್ಡನ್ , ಅಚ್ಲಾಡಿಯಲ್ಲಿ ಎಂಪಾಯರ್, ಕಾಪು ಚಂದ್ರ ನಗರದಲ್ಲಿ ಕ್ರೇಸೆಂಟ್ ಕಾಲೇಜುಗಳಿಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇದೇ ರೀತಿ ಮಂಗಳೂರಿನಲ್ಲಿ 14 ಹೊಸ ಪಿಯು ಕಾಲೇಜುಗಳಿಗೆ ಖಾಸಗಿ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಸದ್ಯ ಈ ಬೆಳವಣಿಗೆ ವಿದ್ಯಾರ್ಥಿಗಳನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವ ಅಪಾಯವನ್ನು ಸೃಷ್ಟಿಸಿದೆ. ಇದರಿಂದ ಅಪಾಯವೇ ಹೊರತು ವಿದ್ಯಾರ್ಥಿಗಳು ಒಟ್ಟಾಗಿ ಬೆರೆಯುವುದಿಲ್ಲ, ಇದು ಅಪಾಯಕಾರಿ ಬೆಳವಣಿಗೆ ಎಂದು ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಹೇಳಿದ್ದಾರೆ.

Edited By :
PublicNext

PublicNext

06/06/2022 05:45 pm

Cinque Terre

44.82 K

Cinque Terre

3

ಸಂಬಂಧಿತ ಸುದ್ದಿ