ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನನಗೂ ಮಾತನಾಡಲು ಅವಕಾಶ ಕೊಡಿ-ಸಿಎಂ ಭಾಷಣದ ಮಧ್ಯೆ ಬಾರಿಕೇಡ್ ಹಾರಿ ಬಂದ ವಿದ್ಯಾರ್ಥಿ

ಮಂಗಳೂರು: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಇಂದು ನಡೆದಿರುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಫಲಾನುಭವಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಸಿಎಂ ಬಸವರಾಜ ಬೊಮ್ಮಾಯಿಯವರು ಮಾತನಾಡುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವನು ತನಗೂ ಮಾತನಾಡಲು ಅವಕಾಶ ಕೊಡಬೇಕೆಂದು ಏಕಾಏಕಿ ಬ್ಯಾರಿಕೇಡ್ ಹಾರಿದ ಘಟನೆಯೊಂದು ನಡೆದಿದೆ.

ಶಂಕರ ಓಬಳಪುರ ಎಂಬ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಈ ರೀತಿಯಲ್ಲಿ ಒಂದು ಕ್ಷಣ ಗೊಂದಲದ ವಾತಾವರಣ ನಿರ್ಮಾಣ ಮಾಡಿದಾತ‌. ಈತ ಬ್ಯಾರಿಕೇಡ್ ಹಾರಿದ ತಕ್ಷಣ ಭದ್ರತಾ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಆತನನ್ನು ತಡೆದು ಹಿಂದಕ್ಕೆ ಕೊಂಡೊಯ್ದಿದ್ದಾರೆ‌‌. ಈ ವೇಳೆಯೂ ಆತ ತನಗೆ ಮಾತನಾಡಲು ಅವಕಾಶ ಕೊಡಬೇಕೆಂದು ಬೊಬ್ಬೆ ಹೊಡೆದಿದ್ದಾನೆ. ಆಗ ಸಿಎಂ ಮಾತಿನ ಮಧ್ಯೆಯೇ ನಿನಗೂ ಮಾತಿಗೆ ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದರು. ಕಾರ್ಯಕ್ರಮ ಮುಗಿದ ಬಳಿಕ ಸಚಿವ ಆರ್ ಅಶೋಕ್ ಅವರು ಆತನಲ್ಲಿ ಮಾತನಾಡಿ, ಆತನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.

ಅಷ್ಟಕ್ಕೂ ಆತನಿಗೆ ಹೇಳಲಿಕ್ಕಿರುವ ವಿಚಾರ ಖಂಡಿತಾ ಹೆಮ್ಮೆಯ ವಿಚಾರವೇ. 'ಮುಖ್ಯಮಂತ್ರಿ ರೈತ ವಿದ್ಯಾನಿಧಿಯನ್ನು ಪಡೆದುಕೊಂಡ ಎಲ್ಲಾ ವಿದ್ಯಾರ್ಥಿಗಳು ತಾನು ಇದರ ಸದುಪಯೋಗ ಪಡೆದುಕೊಂಡು ಐಎಎಸ್, ಐಪಿಎಸ್, ಡಾಕ್ಟರ್ , ಇಂಜಿನಿಯರ್ ಆಗುತ್ತೇನೆ ಎಂದರು. ಆದರೆ ರೈತ ವಿದ್ಯಾನಿಧಿ ಪಡೆದು ಮತ್ತೊಬ್ಬ ರೈತನಾಗುತ್ತೇನೆ ಎಂದು ಯಾರೂ ಹೇಳಿಲ್ಲ. ಇದು ಭಾರೀ ವಿಷಾದದ ವಿಚಾರ. ಆದ್ದರಿಂದ ಈ ಬಗ್ಗೆ ತನಗೆ ಮಾತನಾಡಬೇಕಿತ್ತು‌ ಎಂದು ಆತ ತಿಳಿಸಿದ್ದಾನೆ.

Edited By :
PublicNext

PublicNext

01/06/2022 10:44 pm

Cinque Terre

40.39 K

Cinque Terre

0

ಸಂಬಂಧಿತ ಸುದ್ದಿ