ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಠ್ಯಪುಸ್ತಕ ವಿವಾದ ಶಿಕ್ಷಣ ಸಚಿವರ ವರದಿಯ ಮೇರೆಗೆ ಕ್ರಮ; ಸಿಎಂ ಬೊಮ್ಮಾಯಿ

ಮಂಗಳೂರು: ಪಠ್ಯಪುಸ್ತಕ ವಿವಾದದ ಬಗ್ಗೆ ಶಿಕ್ಷಣ ಸಚಿವರಿಗೆ ಈಗಾಗಲೇ ವರದಿಯನ್ನು ಕೇಳಿದ್ದು, ನಾಳೆ ನಾನು ಹೋದ ತಕ್ಷಣ ವರದಿಯನ್ನು ಒಪ್ಪಿಸುವುದಾಗಿ ಹೇಳಿದ್ದಾರೆ. ಈ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಜಾ ಬಗ್ಗೆ ಮಂಗಳೂರಿನಲ್ಲಿಂದು ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಸಿಎಂ, 'ಶಿಕ್ಷಣ ಸಚಿವರು ಎಲ್ಲಾ ಆಯಾಮಗಳಲ್ಲಿ ವಿಷಯಗಳನ್ನು ವರದಿ ಮುಖಾಂತರ ಕೊಡುವುದಾಗಿ ಹೇಳಿದ್ದಾರೆ. ಈಗಾಗಲೇ ಆದಿಚುಂಚನಗಿರಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೆಲವು ಸತ್ಯಾಂಶಗಳನ್ನು ದಾಖಲೆ ಸಮೇತ ವಿವರಿಸುವುದಾಗಿ ಹೇಳಿದ್ದಾರೆ. ಆ ವರದಿ ಬಂದ ಬಳಿಕ ಮುಂದಿನ ಚಿಂತನೆ ಮಾಡುತ್ತೇವೆ ಎಂದರು.

ಮಳಲಿ ಮಸೀದಿ ವಿವಾದದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣವು ಕೋರ್ಟ್‌ನಲ್ಲಿರುವುದರಿಂದ ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದು‌ ಹೇಳಿದರು.

Edited By :
PublicNext

PublicNext

31/05/2022 09:57 pm

Cinque Terre

39.34 K

Cinque Terre

0

ಸಂಬಂಧಿತ ಸುದ್ದಿ