ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್.ಎಸ್.ಎಲ್. ಸಿ ಟಾಪರ್ಸ್ ಗಳಿಗೆ ಸಚಿವರಿಂದ ಅಭಿನಂದನೆ

ಸುಳ್ಯ : 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಳ್ಯ ತಾಲೂಕಿನ ಕಳಂಜ ಗ್ರಾಮದ ಕಜೆಮೂಲೆ ಡಾ.ಶಶಿಧರ್ ಹಾಗೂ ಡಾ.ಅನುಪಮಾ ಶಶಿಧರ್ ದಂಪತಿಗಳ ಪುತ್ರ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್ ನ ವಿದ್ಯಾರ್ಥಿ ಸಾತ್ವಿಕ್ ಹೆಚ್.ಎಸ್. ಹಾಗೂ 625 ರಲ್ಲಿ 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ಮರಿಯಾ ಕೃಪಾ ಟ್ರಾನ್ಸ್‌ಪೋರ್ಟ್‌ ನ ಮಾಲಕರಾದ ಪ್ರೇಮ್ ಪ್ರಕಾಶ್ ಹಾಗೂ ವೀಣಾ ಮೊಂತೆರೋ ದಂಪತಿಗಳ ಪುತ್ರಿ, ಸುಳ್ಯ ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಪ್ರಿಮಲ್ ವೆನಿಷಾ ಡಿಸೋಜ ಇವರ ಮನೆಗೆ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಅರುಣ್ ನಾಯರ್ ಕಲ್ಲು, ಶಿವರಾಮ ಕೆರೆಮೂಲೆ, ಗಣೇಶ್ ಪಿಲಿಕಜೆ, ಶ್ರೀನಾಥ್ ರೈ ಬಾಳಿಲ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

21/05/2022 11:01 pm

Cinque Terre

5.23 K

Cinque Terre

1

ಸಂಬಂಧಿತ ಸುದ್ದಿ