ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹೆಣ್ಮಕ್ಕಳ್ಳಿಗೆ ಅಗೌರವ ತೋರಿಸುವವರ ವಿರುದ್ಧ ತಕ್ಕ ಕ್ರಮ ತೆಗೆದುಕೊಳ್ಳಿ - ಖಾದರ್

ಮಂಗಳೂರು: ಹಿಜಾಬ್ ವಿಚಾರದಲ್ಲಿ ಜಿಲ್ಲೆಯ ಹೆಸರು ಇಷ್ಟು ಹಾಳಾಗ್ತಿದೆ. ಜಿಲ್ಲಾಡಳಿತ ಏನ್ ಮಾಡ್ತಿದೆ ಎಂದು ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಜಾತಿ ಬಿಟ್ಟು ಬಿಡಿ, ಹೆಣ್ಮಕ್ಕಳನ್ನು ಈ ರೀತಿ ಅಗೌರವ ತೋರಿಸುವುದು ಸರಿಯಾ? ಹುಡುಗರು ದಬ್ಬಾಳಿಕೆ ಮಾಡಿದಾಗ ಪ್ರಾಂಶುಪಾಲರು, ಆಡಳಿತ ಮಂಡಳಿ ತಕ್ಕ ಕ್ರಮ ತೆಗೆದುಕೊಳ್ಳಬೇಕು ಎಂದರು.

ಯಾರು ಭಯ, ಗೊಂದಲದ ವಾತಾವರಣ ಸೃಷ್ಟಿ ಮಾಡ್ತಾರೋ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ.ನಮಗೆ ಶಾಂತಿ, ಸೌಹಾರ್ದ ಬೇಕು.

ಕಾರ್ ಸ್ಟ್ರೀಟ್ ಕಾಲೇಜಿನಲ್ಲಿ ನಡೆ‍ದ ಹಿಜಾಬ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಸತ್ಯಾಂಶ ಹೊರಗೆ ಹಾಕಬೇಕು ಎಂದು ಆಗ್ರಹಿಸಿದರು.

Edited By : Manjunath H D
PublicNext

PublicNext

05/03/2022 05:50 pm

Cinque Terre

62.53 K

Cinque Terre

17

ಸಂಬಂಧಿತ ಸುದ್ದಿ