ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಖಾಸಗಿ ಆರ್ ಎನ್ ಶೆಟ್ಟಿ ಕಾಲೇಜಿನ ಮುಂದೆ ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳು ಜಮಾಯಿಸಿದ್ದಾರೆ. ಕೇಸರಿ ಶಾಲು ಮತ್ತು ಬುರ್ಖಾ ತೊಟ್ಟ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದು ಆರ್ ಎನ್ ಶೆಟ್ಟಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು. ಹೈಕೋರ್ಟ್ ತೀರ್ಪು ಬರುವ ತನಕ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.ಕಾಲೇಜು ಆವರಣದಲ್ಲಿ ಕೇಸರಿ ತೊಟ್ಟ ವಿದ್ಯಾರ್ಥಿಗಳು ಜೈಶ್ರೀರಾಮ್, ಹರಹರ ಮಹಾದೇವ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.
ಆರ್ ಎನ್ ಶೆಟ್ಟಿ ಕಾಲೇಜು ಕುಂದಾಪುರ ನಗರದಲ್ಲೇ ಇದೆ. ಪೊಲೀಸರು ಮತ್ತು ಕಾಲೇಜು ಮಂಡಳಿ ಸಭೆ ನಡೆಸಿ
ಯಾವುದೇ ಆತಂಕಕಾರಿ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಣೆ ಮಾಡಲಾಯಿತು.
PublicNext
05/02/2022 10:55 am