ಮುಲ್ಕಿ: ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 52 ಕೋಟಿ ವೆಚ್ಚದಲ್ಲಿ ಕುಡಿಯುವ ಯೋಜನೆಯ ಕಾಮಗಾರಿಗಳು ನಡೆಯುತಿದೆ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕೆಮ್ರಾಲ್ ಗ್ರಾಮ ಪಂಚಾಯತ್ ನಲ್ಲಿ ಸುಮಾರು 52 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹಾಗೂ ಗೊಳ್ಳಲಿರುವ ಡಿಜಿಟಲ್ ಗ್ರಂಥಾಲಯ , ಮಾಹಿತಿ ಕೇಂದ್ರ, ವಿಕಲಚೇತನ ಶೌಚಾಲಯ, ಸಂಜೀವಿನಿ ಗೋದಾಮು ಕಟ್ಟಡ, ಸೋಲಾರ್ ಲೈಟ್, ಜೆಜೆಎಂ ಅಂಡರ್ ಗ್ರೌಂಡ್ ಟ್ಯಾಂಕ್ ಮತ್ತು ವಿವಿಧ ಕಾರ್ಯಕ್ರಮಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿ ಕ್ಷೇತ್ರದ ಕಳೆದ ಮೂರುವರೆ ವರ್ಷದಲ್ಲಿ ಸುಮಾರು 900 ಕೋಟಿ ರೂಪಾಯಿಗಳ ವಿವಿದ ಕಾಮಗಾರಿಗಳು ನಡೆದಿದೆ, ಜನರ ಎಲ್ಲಾ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತೇನೆ ಅಭಿವೃದ್ಧಿಯಲ್ಲಿ ರಾಜಕೀಯ ಇಲ್ಲ ಎಂದರು.
ಕೆಮ್ರಾಲ್ ಗ್ರಾಮಪಂಚಾಯತ್ ಅಧ್ಯಕ್ಷೆ ಲೀಲಾ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಉಪಾಧ್ಯಕ್ಷ ಸುರೇಶ್ ಪಂಜ ಸದಸ್ಯರಾದ ನಾಗೇಶ್ ಬೊಳ್ಳೂರು, ಹರಿಪ್ರಸಾದ್, ರೇವತಿ, ರಾಜೇಶ್ ಶೆಟ್ಟಿ, ಮಯ್ಯದ್ದಿ ಪಕ್ಷಿಕೆರೆ, ಜಯಂತಿ ಶೆಟ್ಟಿ, ಜಾಕ್ಸನ್, ನವೀನ್, ಮಾಲತಿ, ಅಮೃತ,ಕೇಶವ, ಶಶಿ ಸುರೇಶ್, ಮೆಲಿಟಾ, ಶೋಭಾ, ಸುಮಿತ್ರ, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ನಾಗರಾಜ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಹರಿಶ್ಚಂದ್ರ, ಲೆಕ್ಕ ಸಹಾಯಕ ಕೇಶವ ದೇವಾಡಿಗ , ಉದ್ಯಮಿ ಪ್ರವೀಣ್ ಬೊಳ್ಳೂರು, ಸಚಿನ್ ಶೆಟ್ಟಿ ಪಕ್ಷಿಕೆರೆ, ಮತ್ತಿತರು ಉಪಸ್ಥಿತರಿದ್ದರು.
Kshetra Samachara
16/10/2021 12:42 pm