ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಕಮ್ಮಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವ ಕೋಟ ದಿಡೀರ್ ಭೇಟಿ

ಮುಲ್ಕಿ:ಕಿನ್ನಿಗೋಳಿ ಸಮೀಪದ ಕಮ್ಮಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲೆಯ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಮ್ಮಜೆ ಶಾಲೆಯು ಮೇಲ್ದರ್ಜೆ ಗೇರಿದ್ದು, 6ರಿಂದ ಪಿಯುಸಿ ವರೆಗೆ 450 ವಿದ್ಯಾರ್ಥಿಗಳಿದ್ದಾರೆ. ಆದರೆ ಪಿಯುಸಿಗೆ ಉಪನ್ಯಾಸಕರ ನೇಮಕವಾಗಿಲ್ಲ,ಇದ್ದವರು ಗುತ್ತಿಗೆಯಾಧಾರದಲ್ಲಿದ್ದಾರೆ.ಬಾಲಕರ ವಸತಿ ನಿಲಯ ಇಪ್ಪತ್ತು ವರ್ಷಗಳ ಹಿಂದಿನದ್ದಾಗಿದ್ದು, ದುರಸ್ತಿಯ ಅಗತ್ಯವಿದೆ.ವಸತಿ ನಿಲಯದಲ್ಲಿ ಮಂಚಗಳನ್ನು ಹಾಕಲು ಕಷ್ಟಕರವಾಗಿದೆ. ಶೌಚಾಲಯದ ನಿರ್ವಹಣೆ ಕಷ್ಟದಾಯಕವಾಗಿದೆ.

125 ಬಾಲಕರಿಗೆ ಅಗತ್ಯವಿರುವ ಕಟ್ಟಡವನ್ನು ನಿರ್ಮಿಸಿಕೊಡ ಬೇಕು. ಆರು ಸಿಬ್ಬಂದಿಗಳಿಗೆ ವಸತಿ ಗೃಹಗಳ ಅಗತ್ಯವಿದೆ

ಎಂದು ಇಲಾಖೆಯ ಸಹಾಯಕ ನಿರ್ದೇಶಕ ಯೋಗೀಶ್ ವಸತಿ ಶಾಲೆಗಳ ಅವಶ್ಯಕತೆಗಳ ಬಗ್ಗೆ ಸಚಿವರ ಗಮನ ಸೆಳೆದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಏಳು ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ಶಾಲೆಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 4 ಸೇರಿ ಒಟ್ಟು 11 ಶಾಲೆಗಳಲ ಹತ್ತರಲ್ಲಿ ವಾರ್ಡನ್ ,ಅಡುಗೆ ಸಿಬ್ಬಂದಿಗಳ ಕೊರತೆ ಇದೆ, ಗಳಿಗೆ ಆಹಾರ ಪೂರೈಕೆ ರಾಜ್ಯ ಮಟ್ಟದಲ್ಲಿ ನಿರ್ಣಯವಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆದರೆ ಉತ್ತಮ ಎಂದು ಅಗತ್ಯ ಕ್ರಮಗಳ ಬೇಡಿಕೆಯನ್ನು ಶಾಲಾ ಪ್ರಾಚಾರ್ಯರಾದ ಡಾಕ್ಟರ್ ಪುಟ್ಟಸ್ವಾಮಿ ಎನ್ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡರಾದ ಸುನಿಲ್ ಆಳ್ವ, ಕೇಶವ ಕರ್ಕೇರ, ವಿಠಲ ಎನ್.ಎಂ, ಮುಲ್ಕಿ ನಪಂ ಉಪಾಧ್ಯಕ್ಷ ಸತೀಶ್ ಅಂಚನ್, ಮೆನ್ನಬೆಟ್ಟು ಗ್ರಾಪಂ ಮಾಜೀ ಅಧ್ಯಕ್ಷ ಜನಾರ್ದನ ಕಿಲೆಂಜೂರು ಉಪಸ್ಥಿತರಿದ್ದರು

Edited By : Manjunath H D
Kshetra Samachara

Kshetra Samachara

28/08/2021 01:10 pm

Cinque Terre

12.25 K

Cinque Terre

1

ಸಂಬಂಧಿತ ಸುದ್ದಿ