ಉಡುಪಿ: ಇವತ್ತು ಫ್ರಾನ್ಸ್ ಕೂಡ ಹಿಜಾಬ್ ನ ಅಪಾಯ ಅರಿತು ಹಿಜಾಬ್ ಮತ್ತು ಹಲಾಲ್ ನ್ನು ನಿಷೇಧಿಸಲು ಹೊರಟಿದೆ.ಭಾರತದಲ್ಲೂ ಮುಂದೆ ಈ ಕ್ರಮ ಆಗಬಹುದು ಎಂದು ಉಡುಪಿ ಬಾಲಕಿಯರ ಸರಕಾರಿ ಕಾಲೇಜಿನ ಉಪಾಧ್ಯಕ್ಷ ಮತ್ತು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇವತ್ತು ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಜೆ ಬಂದು ಹಿಜಾಬ್ ಗಾಗಿ ಹಠ ಹಿಡಿದಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯ ತಮ್ಮ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಯಶ್ ಪಾಲ್ ಸುವರ್ಣ ,ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟ ಹಿಜಾಬ್ ನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲು ಹೊರಟಿದೆ.ಭಾರತ ಕೂಡ ಹಿಂದೂ ರಾಷ್ಟ್ರದ ಪರಿಕಲ್ಪನೆಯಂತೆ ಬದಲಾಗುತ್ತಿದೆ.ಇಲ್ಲಿ ಸಾರ್ವಜನಿಕ ಸ್ಥಳಗಳ್ಲಿ ಹಿಜಾಬ್ ನ್ನುನಿಷೇಧಿಸುವ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡುವ ಪರಿಸ್ಥಿತಿ ಮುಂದೆ ಆಗಬಹುದು ಎಂದು ಹೇಳಿದ್ದಾರೆ.
PublicNext
22/04/2022 06:52 pm